ತಾಳಿಕೋಟಿ

ಶಾಂತ ರೀತಿಯಿಂದ ರಂಜಾನ್ ಹಬ್ಬ ಆಚರಿಸಿ: ಮಂಟೂರ

ಶಾಂತ ರೀತಿಯಿಂದ ರಂಜಾನ್ ಹಬ್ಬ ಆಚರಿಸಿ: ಮಂಟೂರ

ತಾಳಿಕೋಟಿ: ಜಗತ್ತಿನಲ್ಲಿರುವ ಎಲ್ಲ ಧರ್ಮಗಳು ಶಾಂತಿಯನ್ನೇ ಭೋದಿಸಿವೆ. ಹಿಂಸೆಗೆ ಯಾವ ಧರ್ಮವು ಪ್ರೋತ್ಸಾಹಿಸುವುದಿಲ್ಲ. ಹಬ್ಬಗಳು ಸಂತೋಷದ ಸಂದರ್ಭಗಳಾಗಿವೆ. ಅದರಲ್ಲಿ ಎಲ್ಲ ಧರ್ಮಿಯರೂ ಭಾಗವಹಿಸುವಂತಾಗಬೇಕು. ರಂಜಾನ್ ಹಬ್ಬ ಪ್ರೀತಿ ಹಾಗೂ ಶಾಂತಿಯನ್ನು ಸಾರುವ ಹಬ್ಬವಾಗಿದೆ ಎಂದು ಸ್ಥಳೀಯ ಠಾಣಾ ನಿರೀಕ್ಷಕ ಸುರೇಶ ಮಂಟೂರ ಹೇಳಿದರು. 

     ಶುಕ್ರವಾರ ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿ ರಮಾಜಾನ್ ಹಬ್ಬದ ಅಂಗವಾಗಿ ಕರೆದ ಸರ್ವಧರ್ಮದ ಮುಖಂಡರ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.

       ರಮಜಾನ್ ಹಬ್ಬ ಮುಸ್ಲೀಂ ಬಾಂಧವರ ಪಾಲಿಗೆ ಅತಿ ದೊಡ್ಡ ಹಬ್ಬವಾಗಿದೆ. ಈ ಹಬ್ಬವು ಶಾಂತ ರೀತಿಯಿಂದ ಆಚರಿಸುವಂತಾಗಲು ಇಲಾಖೆ ಎಲ್ಲ ರೀತಿಯಿಂದ ವ್ಯವಸ್ಥೆ ಮಾಡಿಕೊಂಡಿದೆ ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು ಎಂದರು.

     ಜಾಮೀಯ ಮಸೀದಿ ಅಧ್ಕಕ್ಷ ಅಲ್ಲಾಭಕ್ಷ ನಮಾಜಕಟ್ಟಿ ಮಾತನಾಡಿ ಇದು ಚುನಾವಣೆಯ ಸಂಧರ್ಭವಾಗಿದೆ, ನಾವೆಲ್ಲರೂ ಈ ಹಬ್ಬವನ್ನು ಶಾಂತರೀತಿಯಿಂದ ಆಚರಿಸಿ ಕಾನೂನು ಸುವ್ಯವಸ್ಥೆ ಕೆಡದಂತೆ ನೋಡಿಕೂಳ್ಳಬೇಕಾಗಿದೆ. ಪಟ್ಟಣದ ಶಾಂತಿ ನಮ್ಮೆಲ್ಲರಿಗೂ ಮುಖ್ಯವಾಗಬೇಕು ಎಂದರು.

       ಹಿರಿಯ ಪತ್ರಕರ್ತ ಜಿ.ಟಿ. ಪೋರ್ಪಡೆ ಅವರು ಮಾತನಾಡಿ ಹಬ್ಬಗಳು ಶಾಂತಿ-ಸಾಮರಸ್ಯದ ಸಂಕೇತಗಳಾಗಿವೆ. ಪವಿತ್ರ ರಮಜಾನ್ ಮಾಸ ಶಾಂತಿಯ ಮಾಸವಾಗಿತ್ತು. ಮುಸ್ಲೀಂ ಬಾಂಧವರು ಒಂದು ತಿಂಗಳ ಕಾಲ ಕಠಿಣ ಉಪವಾಸ ವೃತಗಳನ್ನು ಆಚರಿಸಿದ್ದಾರೆ ಅದರಿಂದ ಸಿಗುವ ಶಾಂತಿ ಹಾಗೂ ಸಹನೆಯ ಗುಣ ಸಮಾಜದಲ್ಲಿ ಪಸರಿಸುವಂತಾಗಬೇಕು ಎಂದರು.

      ಈಸಮಯದಲ್ಲಿ ಪುರಸಭೆ ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಶಮ್ಸುದ್ದೀನ ನಾಲಬಂದ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಮಹ್ಮದ ಲಾಹೋರಿ, ಮಹಿಬೂಬಶ್ಯಾ ಮಕಾನದಾರ, ಅಬ್ದುಲ್ರಜಾಕ್ ಮಮದಾಪೂರ. ಮಂಜೂರಅಲಿ ಬೇಪಾರಿ, ನಿಸಾರ ಬೇಪಾರಿ, ಖಾಜಾಹುಸೇನ ಮುಲ್ಲಾ, ಮೈನು ಮೊಕಾಶಿ, ಗೌಸನಾಸರ, ನದೀಂ ಕಡು. ಪೀರಮಹ್ಮದ ಖಾಜಿ, ಎ.ಎಸ್.ಆಯ್. ಅಶೋಕ ನಾಯ್ಕೋಡಿ, ಗಿರೀಶ ಚಲವಾದಿ, ವಿರೇಶ ಅಜ್ಜನ್ನವರ, ಪ್ರಭು ಗನತಿ, ಸಂಜು ದೂಡಮನಿ, ಎಂ.ಎಲ್. ಪಟ್ಟೇದ, ಎಲ್ಲಪ್ಪ ಹರಗಲ್ಲ ಇದ್ದರು 

ಸುದ್ದಿ ಓದಿ