ಹೋಳ್ಳಿ ಹಬ್ಬವನ್ನು ಸೌಹಾರ್ದ ಶಾಂತಿಯುತವಾಗಿ ಆಚರಿಸಿ: ಪಿಎಸ್‌ಐ ಅರವಿಂದ ಅಂಗಡಿ
Celebrate Holi festival in a peaceful and harmonious manner: PSI Aravinda Angadi
ಆಲಮೇಲ 01 : ಯಾವುದೇ ಧರ್ಮದ ಹಬ್ಬಗಳಾಗಲಿ ಭಾವೈಕ್ಯತೆಯಿಂದ ಶಾಂತಿಯುತವಾಗಿ ಹಬ್ಬಗಳು ಆಚರಣೆ ಮಾಡಬೇಕು ಎಂದು ಪಿಎಸ್‌ಐ ಅರವಿಂದ ಅಂಗಡಿ ಹೇಳಿದರು. ಶನಿವಾರ ಸಂಜೆ ಪೊಲೀಸ್ ಠಾಣೆಯಲ್ಲಿ ಹೂಳಿ ಹಬ್ಬದ ನಿಮಿತ್ತವಾಗಿ ಪೂರ್ವ ಬಾವಿ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೆಳಿದರು. ಹಬ್ಬದ ಆಚರಣೆ ಸಂದರ್ಭದಲ್ಲಿ ಕಾನೂನು ಬಂಗ ಗೊಳಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು. ಹೂಳಿ ಹುಣ್ಣಿಮೆಯಂದು ಪಿಯುಸಿ ಪರೀಕ್ಷೆ ಇರುವದರಿಂದ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಯಾರು ಬಣ್ಣ ಎರಚುವದು ತೊಂದರೆ ನೀಡಬಾರದು. ಹಾಗೆ ವಿನಾಕಾರಣ ಕಿಡಗೆಡಿತನ ಮಾಡಿ ಸಮಜಾದಲ್ಲಿ ಶಾಂತಿ ಬಂಗಗೊಳಿಸುವರನ್ನು ಗ್ರಾಮದ ಹಿರಿಯರು ತಿಳಿ ಹೇಳಿ ಇಲ್ಲದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳವುದಾಗಿ ಹೇಳಿದರು. ಶ್ರೀಶೈಲ ಮಠಪತಿ, ಹರೀಶ ಯಂಟಮಾನ, ಮೈಬೂಬ ಮಾಳಿ ಮುಂತಾದವರು ಮಾತನಾಡಿದರು. ಶಾಂತಿ ಸಭೆಯಲ್ಲಿ ಬಸವರಾಜ ತೆಲ್ಲೂರ, ವಾಹಬ ಸುಂಬಡ, ದೇವಪ್ಪ ಗುಣಾರಿ, ಸಿದ್ದುಗೌಡ ಕೊಳಾರಿ, ರಾಜಾಹ್ಮದ ಪಟೇಲ, ಸಂತೋಷ ಜರಕರ ಮುಂತಾದವರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 