ಜಾತಿ ಆಧಾರಿತ ಅಪರಾಧ ಇನ್ನೂ ತೊಲಗಿಲ್ಲ: ಅಬ್ದುಲ್ ನಬಿ
ಲೋಕದರ್ಶನ ವರದಿ
ಸಿರುಗುಪ್ಪ 29: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇಲ್ಲಿನ ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿ ವಾದದ ಪಿಡುಗನ್ನು ತೊಲಗಿಸಲು ಸಾಧ್ಯವಾಗಿಲ್ಲ ಸುಪ್ರೀಂಕೋರ್ಟ್ ವಿಷಾದಿಸಿದೆ. ಜಾತಿ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ಸಾರಾ ಸಗಟಾಗಿ ನಿರಾಕರಿಸುವಂತ ಮನೋಭಾವ ನಮ್ಮ ಸಮಾಜದಲ್ಲಿ ಇನ್ನಾದರೂ ಬೆಳೆಯಲಿ ಎಂದು ಲೋಕ ಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯರು ಜನಾಭಿಪ್ರಾಯ ಮುಖಂಡ ಎ ಅಬ್ದುಲ್ ನಬಿ ಅವರು ಆಶಿಸಿದ್ದಾರೆ.
ಮತ್ತೆ ಸಾವಿನ ಹೆದರಿಕೆ ಬೇಡ ಮತ್ತೆ ಬದುಕಿನ ಆತಂಕದಲ್ಲಿ ಮತ್ತೆ ನಿರಾಸೆಯ ಸನಿಹದಲ್ಲಿ ಭ್ರಷ್ಟಾಚಾರ ಕಡಿಮೆಯಾಗಬೇಕು ಜಾತಿಯ ಅಸಮಾನತೆ ಹೋಗಬೇಕು ಪರಿಸರ ನಾಶ ಆಗುತ್ತಲೇ ಇದೆ ಆಹಾರ ಕಲಬೆರೆಕೆ ನಡೆಯುತ್ತಲೇ ಇದೆ ಅಧಿಕಾರದ ದಾಹ ಇಳಿಯುತ್ತಲೇ ಇಲ್ಲ. 1ಕಡೆ ಪ್ರಾಕೃತಿಕ ಸವಾಲುಗಳು ಮತ್ತೊಂದು ಕಡೆ ಆರಾಳ ಆತ್ಮಿಕಾ ವೈಫಲ್ಯಗಳು ಸಾಮಾಜಿಕ ಆರ್ಥಿಕ ಅಸಮಾನತೆಗಳು ದೈಹಿಕ ಮಾನಸಿಕ ತಾಕಲಾಟಗಳು ಎಲ್ಲವನ್ನು ಏಕಕಾಲದಲ್ಲಿ ಎದುರಿಸಬೇಕಾದ ಅಗ್ನಿಪರೀಕ್ಷೆ ಬಂದೊಗಿದೆ. ಹಾಲಿಗೆ ಯೂರಿಯಾ ನೀರಿಗೆ ರಾಸಾಯನಿಕಗಾಳಿಗೆ ಹೊಗೆ ಆಹಾರದ ಕಲಬೆರಕೆ ಶಿಕ್ಷಣ ಆರೋಗ್ಯ ಸಾಹಿತ್ಯ ಸಮಾಜ ಸೇವೆ ದೇವರ ಪ್ರಾರ್ಥನೆಯನ್ನು ದಂಧೆಯಾಗಿ ಮಾಡಿಕೊಳ್ಳಬಾರದು ಭ್ರಮೆಯಿಂದ ಹೊರ ಬರ ತೊಡಗಿಕೊಳ್ಳಬಾರದು. ಮಾನವೀಯ ಮೌಲ್ಯಗಳ ಗುಣಮಟ್ಟದ ಆಹಾರವೇ ಆಧಾರವೇ ಅಭಿವೃದ್ಧಿ ಎನ್ನಬೇಕೆ? ಮಾನವೀಯ ಮೌಲ್ಯಗಳ ಗುಣಮಟ್ಟದ ಆಧಾರವೇ ಅಭಿವದ್ಧಿ ಎನ್ನಬೇಕೆ? ಇದೆಲ್ಲದರ ನಡುವೆಯೂ ಬದುಕು ನಮ್ಮ ನೀರೀಕ್ಷೆಯಂತೆ ಮಾತ್ರ ಇರುವುದಿಲ್ಲ ಬದುಕಿನ ನೀರೀಕ್ಷೆಗೆ ನಾವು ಸಹ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಸರಳ ಸತ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಅಬ್ದುಲ್ ನಬಿ ಅವರು ಅಭಿಪ್ರಾಯಪಟ್ಟರು.