ಬಳ್ಳಾರಿ

ಗುತ್ತಿಗೆದಾರರ ಮೇಲೆ ಕೇಸ್ ಹಾಕಿ: ಶಾಸಕ ಪಿಟಿ.ಪಿ

ಗುತ್ತಿಗೆದಾರರ ಮೇಲೆ ಕೇಸ್ ಹಾಕಿ: ಶಾಸಕ ಪಿಟಿ.ಪಿ
ಲೋಕದರ್ಶನ ವರದಿ ಹೂವಿನಹಡಗಲಿ 20: ಪಟ್ಟಣದ ಹೃದಯ ಭಾಗದಲ್ಲಿರುವ ಜಿಪಿಜಿ ಕಾಲೇಜು ಕಟ್ಟಡ ಕಾಮಗಾರಿ ಮೂರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ, ಕೂಡಲೇ ಗುತ್ತಿಗೆ ದಾರರ ಮೇಲೆ ಕೇಸ್ ಹಾಕಿ ಏಳು ದಿನಗಳಲ್ಲಿ ಕಟ್ಟಡ ಕಾಮಗಾರಿ ಆರಂಭಿಸಬೇಕು ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅಧಿಕಾರಿಗಳಿಗೆ ತಾಕೀತ್ ಮಾಡಿದರು. ತಾ.ಪಂ.ರಾಜೀವ್ ಗಾಂಧಿ ಸಭಾಂಗಣದಲ್ಲಿ ನಾನಾ ಇಲಾಖೆಗಳ ಪ್ರಗತಿ ಪರೀಶೀಲನಾ ತುರ್ತು ಸಭೆಯಲ್ಲಿ ಜಿ.ಪಂ.ಎಇಇ ಅಧಿಕಾರಿ ಜಯರಾಮ್ ತರಾಟೆಗೆ ತೆಗೆದುಕೊಂಡಾಗ ಇದಕ್ಕೆ ಸ್ಪಂದಿಸಿ ಸಂಬಂಧ ಪಟ್ಟ ಗುತ್ತಿಗೆದಾರರನ್ನು ಕರೆದು ವಾರದೊಳಗೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು. ತಾಲೂಕಿನ ಮೈಲಾರದಲ್ಲಿ ನಿವೇಶನ ರಹಿತ ಬಡವರಿಗೆ ಮನೆಗಳನ್ನು ವಿತರಿಸಿ ಎಂದರು, ದೇವಸ್ಥಾನಕ್ಕೆ ಶಾಸಕರ ಅನುದಾನ ಬೇಡ ಎಂದು ಗುಡಿಗೆ ಬೀಗ ಹಾಕಿದ್ದಾರೆ, ಆ ವ್ಯಕ್ತಿ ದೇವಸ್ಥಾನಕ್ಕೆ ನೀಡಿರುವ ಹಣವನ್ನು ಠೇವಣೆ ಮಾಡಲಿ ಈ ಕುರಿತು ಪೊಲೀಸರು ದೇವಸ್ಥಾನಕ್ಕೆ ಹಾಕಿರುವ ಬೀಗವನ್ನು ತೆರವು ಮಾಡಿ ದೈವಸ್ಥರಿಗೆ ಹಸ್ತಾಂತರಿಸಬೇಕು ಎಂದರು. ಹರವಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ, ನಿರ್ಲಕ್ಷ್ಯ ಮಾಡಿದರೇ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ತಹಶೀಲ್ದಾರ ಎ.ಹೆಚ್‌.ರಮೇಶ ಕುಲಕರ್ಣಿ, ಪುರಸಭೆ ಅಧ್ಯಕ್ಷ ವಾರದಗೌಸ್ ಮೊಹಿದ್ದೀನ್ ಇದ್ದರು.

ಸುದ್ದಿ ಓದಿ