ವೃತ್ತಿ ಜೀವನದ ಹಾದಿ, ವಿದೇಶದಲ್ಲಿ ಅವಕಾಶಗಳು: ವೆಬಿನಾರ್ ಕಾರ್ಯಕ್ರಮ
ಬಳ್ಳಾರಿ 26: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯ ದಲ್ಲಿ "ವೃತ್ತಿ ಜೀವನದಹಾದಿ ಮತ್ತು ವಿದೇಶದಲ್ಲಿ ಅವಕಾಶಗಳು" ವೆಬಿನಾರ್ ಕಾರ್ಯಕ್ರಮವು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅಂಶಗಳು 1. ಅಮೆರಿಕಾ, ಆಸ್ಟ್ರೇಲಿಯಾ, ಕೆನಾಡ, ಐರಾ್ಲಂಡ್, ಐರೋಪಾ ದೇಶಗಳಲ್ಲಿ ಅವಕಾಶಗಳು, 2. ವಿದೇಶಗಳಲ್ಲಿ ನಮ್ಮದೇಶದಿಂದ ಪ್ರವೇಶಮಾಡಲು ವಿಧಾನಗಳು, 3. ವಿವಿದ ಸ್ಥಳಗಳಲ್ಲಿ ತೆಗೆದುಕೊಳ್ಳುವ ಪರೀಕ್ಷೆಗಳೂ, ಐಇಎಲ್ಟಿಎಸ, ಪಿಟಿಇ, ಟೋಫೆಲ್, ಜಿಎಂಎಟಿ, ಜಿಆರ್ಈ. ಬಗ್ಗೆ ಮಾಹಿತಿ ಹಾಗು ಅವಕಾಶಗಳು, ವಿದ್ಯಾರ್ಥಿ ವೇತನಗಳು ಮುಂತಾದ ಮುಖ್ಯ ಅಂಶಗಳು ವಿವರಿಸುವುದು.
ಪ್ರಾಂಶುಪಾಲರಾದ ಡಾ. ಟಿ. ಹನುಮಂತರೆಡ್ಡಿ, ಮಾತನಾಡುತ್ತಾ "ವಿದೇಶದಲ್ಲಿ ಅಧ್ಯಯನಾ ಮಾಡಲು, ವೃತ್ತಿಜೀವನದ ಅವಕಾಶಗಳನ್ನು ಅನ್ವೇಷಿಸಲು ಮತ್ತು ಜಾಗತೀಕವಾಗಿ ಗುರುತಿಸಿಕೋಳ್ಳಲು ಮುಂದಾಗಬೇಕಾಗಿದೆ, ಅಲ್ಲಿನ ತಾಂತ್ರಿಕತೆಗಳಬಗ್ಗೆ ತಿಳಿದುಕೊಳ್ಳಬೇಕಾಗಿದೆ" ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಡಾ. ಬಿ.ಶ್ರೀಪತಿ, ಮಾಹಿತಿ ವಿಜ್ಞಾನ ಇಂಜೀನೀರಿಂಗ್ ವಿಭಾಗದಮುಖ್ಯಸ್ಥರು, "ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅದ್ಯಾಯನವು ನಿಮ್ಮ ವೃತ್ತಿ ಜೀವನದಲ್ಲಿ ಓಳ್ಳೆಯ ಅವಕಾಶಗಳು ನೀಡಲು ಸಹಕರಿಸುತ್ತದೆ" ಎಂದು ನುಡಿದರು, ಮುಖ್ಯ ಭಾಷಣಕಾರರು ಮೆಹಾನಾಜ್, ಅಮೆರಿಕಾ,ಕೆನಾಡದ ಹಿರಿಯ ತಜ್ಞರು " ವಿದೇಶಿ ವಿಶ್ವವಿದ್ಯಾಲಯ ಪ್ರವೇಶ, ಪೂರ್ವಆಪೇಕ್ಷಿತ ತಯಾರಿ, ಅಭಿವೃದ್ದಿ,"ಗಳ ಬಗ್ಗೆ ವಿವರಿಸಿದರು. ಆರ್ವೈಎಂಸಿಯ ಪ್ಲೇಸ್ಮೆಂಟ್-ಅಧಿಕಾರಿ ಪ್ರೋ.ಗುರುರಾಜ್.ಕೆ ಮಾತನಾಡಿದರು.
ವೀ.ವಿ.ಸಂಘದ ಪದಾದಿಕಾರಿ ಅಧ್ಯಕ್ಷ ಗುರುಶಿದ್ದಸ್ವಾಮಿ, ಉಪಾಧ್ಯಕ್ಷ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್ ಗೌಡರು ಇವರುಗಳು, ಪ್ರಾಂಶುಪಾಲರಾದ ಡಾ. ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರಾದ ಡಾ. ಸವಿತಾ ಸೊನೋಳಿ, ಶುಭ ಹಾರೈಸಿದರು. ಮಹಾಂತೇಶ್ ಹೆಚ್.ಎಂ ಸಹಾಯಕ ಪ್ರೋಫೆಸರ್ ಈ ಕಾರ್ಯಕ್ರಮವು ಸಮನ್ವಯಿಸಿದರು.