ಹುನಗುಂದ

ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲಿಯೇ ನಾಲ್ವರ ದುರ್ಮರಣ

ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲಿಯೇ ನಾಲ್ವರ ದುರ್ಮರಣ

ಹುನಗುಂದ30:  ಸ್ನೇಹಿತನ ಹುಟ್ಟು ಹಬ್ಬದ ಪಾರ್ಟಿ ಮುಗಿಸಿಕೊಂಡು ಕಾರಿನಲ್ಲಿ ಮರಳಿ ಬರುತ್ತಿದ್ದ ವೇಳೆ ಲಾರಿಗೆ ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲಿ ಮೃತಪಟ್ಟು ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಬೇವಿನಮಟ್ಟಿ ಕ್ರಾಸ್ ಬಳಿ ನಡೆದಿದೆ. 

ಕಾರು ಅಪಘಾತದ ದುರ್ಘಟನೆಯಲ್ಲಿ ಮೃತಪಟ್ಟ ನಾಲ್ವರು ಇಲಕಲ್ಲ ಮೂಲದವರಾದ ನವೀನ ಸಾಕಾ (22), ಚಂದ್ರಶೇಖರ ಬುಟ್ಟಾ (22), ಚನ್ನಬಸಪ್ಪ ಅಂಜಿ (22), ಬಸವರಾಜ ಭಂಡಾರಿ (33) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಕಾರು ಚಾಲಕ ವಿಜಯಕುಮಾರ ಬಂಡಿ ಈತನನ್ನು ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.         

ಘಟನೆಯ ವಿವರ; ರವಿವಾರ ಇಲಕಲ್ಲ ಮೂಲದ ಈ 5ಜನ ಸ್ನೇಹಿತರು ಗುಳೇದಗುಡ್ಡದ ತಮ್ಮ ಆತ್ಮೀಯ ಸ್ನೇಹಿತನ ಬರ್ತ್ ಡೇಗೆ ಹೋಗಿ ಹುಟ್ಟು ಹಬ್ಬವನ್ನು ಆಚರಿಸಿ ಮರಳಿ ಇಲಕಲ್ಲ ಕಡೆಗೆ ಬರುವಾಗ ಬೇವಿನಮಟ್ಟಿ ಕ್ರಾಸ್ ಬಳಿ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಕಾರನ್ನು ಓವರಟೇಕ್ ಮಾಡುವಾಗ, ಹಿಂಬದಿಯಲ್ಲಿ ಬರುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿ 4ಜನ ಸ್ಥಳದಲ್ಲಿ ಸಾವನ್ನಪ್ಪಿ ಕಾರು ಚಾಲಕನಿಗೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.  ಬರ್ತ್ ಡೇಗೆ ಹೋದವರು; ಸ್ನೇಹಿತನ ಹುಟ್ಟು ಹಬ್ಬಕ್ಕೆ ಹೋಗಿ ಸಂತಸದ ಕ್ಷಣಗಳನ್ನು ಖುಷಿ ಖುಷಿಯಾಗಿ ಹಂಚಿಕೊಂಡು ಮಾತನಾಡುತ್ತ ಮರಳಿ ಮನೆ ಸೇರುತ್ತಿದ್ದ ಈ 4ಜನ ಆತ್ಮೀಯ ಗೆಳೆಯರ ಆ ಸಂತಸವನ್ನು ಜವರಾಯ ಸಹಿಸದೆ ಒಂದೇ ಕ್ಷಣದಲ್ಲಿ ನಾಲ್ವರನ್ನು ಮಸಣ ಸೇರಿಸಿದ್ದಂತೂ ಕರುಣಾಜನವಾಗಿದೆ. ಸ್ನೇಹಿತನ ಬರ್ತ್ ಡೇ ದಿನವೆ ಈ 4ಜನ ಸ್ನೇಹಿತರ ಕೊನೆ ದಿನವಾಗಿತ್ತು ಅಂತಾ ಯಾರು ಕನಸು-ಮನಸಿನಲ್ಲಿ ಅಂದುಕೊಳ್ಳದ ರೀತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಸಂಭವಿಸುತ್ತಿದ್ದಂತೆ ಹುನಗುಂದ ಪೊಲೀಸ್ ಠಾಣೆಯ ಸಿಪಿಐ ಅಯ್ಯನಗೌಡ ಪಾಟೀಲ, ಪಿಎಸ್‍ಐ ಶರಣಬಸಪ್ಪ ಸಂಗಳದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಸುದ್ದಿ ಓದಿ