ತಾಳಿಕೋಟಿ

ವಿವಿಧ ಸಮಾಜಗಳಿಂದ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ

ವಿವಿಧ ಸಮಾಜಗಳಿಂದ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ

ತಾಳಿಕೋಟೆ27: ತಾಲೂಕಿನ ಬ.ಸಾಲವಾಡಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಪ್ರಮುಖ ಬಿಜೆಪಿ ಹಾಗು ಕಾಂಗ್ರೆಸ್ ಕಾರ್ಯಕರ್ತರು, ರೆಡ್ಡಿ ಸಮಾಜದ ಯುವ ನಾಯಕರು, ಮಾಜಿ ತಾಲೂಕು ಪಂಚಾಯತ ಅಧ್ಯಕ್ಷ ರಾಜುಗೌಡ ಕೋಳೂರ ನೇತೃತ್ವದಲ್ಲಿ ದೇವರ ಹಿಪ್ಪರಗಿ ಜೆಡಿಎಸ್ ಅಭ್ಯರ್ಥಿ  ರಾಜುಗೌಡ ಪಾಟೀಲ ಕುಡದರಿಸಾಲವಾಡಗಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷವನ್ನು ಸೇರಿದರು.

ತಾಲೂಕಿನ ಬ.ಸಾಲವಾಡಗಿ ಗ್ರಾಮದಲ್ಲಿ ನಡೆದ ಬೃಹತ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ತಾಲೂಕ ಪಂಚಾಯತ ಅಧ್ಯಕ್ಷ ರಾಜುಗೌಡ ಕೊಳೂರ, ಮಾಜಿ ಗ್ರಾಪಂ ಅಧ್ಯಕ್ಷ ಎಮ್.ಎಮ್.ಪೊಲೀಸ್ಪಾಟೀಲ, ಗ್ರಾಪಂ ಸದಸ್ಯರಾದ ಜಾಹಾಂಗೀರ ಮುಲ್ಲಾ, ವಿರೇಶ ಚಿಂಚೋಳ್ಳಿ, ಗುರಪ್ಪ ಬಿಳೆಬಾವಿ, ಶಿವಪ್ಪ ಹಳ್ಳಿ, ಸಾಹೇಬಗೌಡ ಬಾವೂರ, ವಿಶ್ವನಾಥ ಜಾಹಿಗಿರದಾರ, ಮಾಜಿ ಗ್ರಾಪಂ ಸದಸ್ಯ ವಿಶ್ವನಾಥರೆಡ್ಡಿ ಪಾಟೀಲ ಲಕ್ಕುಂಡಿ ಮುಖಂಡರಾದ ವಿಶ್ವನಾಥರೆಡ್ಡಿ ನಾಡಗೌಡ ಸೇರಿದಂತೆ ಸುಮಾರು 200 ಕ್ಕು ಅಧಿಕ ಕಾರ್ಯಕರ್ತರು ಜೆಡಿಎಸ್ ಪಕ್ಷವನ್ನು ಸೇರಿದರು. ಇದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದಿಂದ, ಲಂಬಾಣಿ ಸಮುದಾಯ ಸೇರಿದಂತೆ ಇವಿಧ ಸಮಾಜಗಳಿಂದ ಬೆಂಬಲವನ್ನು ನೀಡಲಾಯಿತು.

 ಮಾತನಾಡಿದ ಜೆಡಿಎಸ್ ಅಭ್ಯರ್ಥಿ  ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಕಳೆದ ಎರಡು ಬಾರಿ ನಾನು ಸ್ಪರ್ಧೆ ಮಾಡಿದ್ದಾಗ ಬ.ಸಾಲವಾಡಗಿ ಜಿಪಂ ಮತಕ್ಷೆತ್ರದಲ್ಲಿ ನನಗೆ ಕಡಿಮೆ ಮತಗಳು ಬಂದಿದ್ದರಿಂದ ಸೋಲು ಅನುಭವಿಸಬೇಕಾಯಿತು. ಈ ಬಾರಿ ಬ.ಸಾಲವಾಡಗಿ ಜಿಪಂ ಕ್ಷೇತ್ರದಲ್ಲಿ ರಾಜುಗೌಡ ಕೋಳೂರ, ಎಮ್.ಎಮ್.ಪೊಲೀಸ್ಪಾಟೀಲರು ಹಾಗೂ ಅವರ ಸ್ನೇಹಿತರ ಬಳಗ ನನ್ನ ಕೈಹಿಡಿದಿದ್ದು ಮತ್ತಷ್ಟು ಬಲ ನೀಡಿದೆ. ನಾನು ರೈತನ ಮಗನಾಗಿದ್ದೇನೆ. ಬಡವರ ಕಷ್ಟ ಗೊತ್ತು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ದೇವರ ಹಿಪ್ಪರಗಿ ಮತಕ್ಷೇತ್ರವನ್ನು ಮಾದರಿ ಮತಕ್ಷೇತ್ರವನ್ನಾಗಿ ಮಾಡುತ್ತೇನೆ. ಒಂದು ಬಾರಿ ಅವಕಾಶ ಮಾಡಿ ಕೊಡಿ. ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ. ಜೆಡಿಎಸ್ ನಾಯಕ ಕುಮರಸ್ವಾಮಿ ಅವರು ಈ ಬಾರಿ ರೈತ ಪರವಾದ ಭರವಸೆಗಳನ್ನು ನೀಡಿದ್ದಾರೆ. ಅವರ ಕೈ ಬಲಪಡಿಸಲು ಜೆಡಿಎಸ್ನ್ನು ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಅರಳಿಸಬೇಕಾಗಿದೆ ಎಂದರು.

ಪಕ್ಷ ಸೇರಿದ ಮಾಜಿ ತಾಪಂ ಅಧ್ಯಕ್ಷ ರಾಜುಗೌಡ ಕೋಳೂರ ಮಾತನಾಡಿ, ಜೆಡಿಎಸ್ ಅಭ್ಯಥರ್ಿಯಾದ ರಾಜುಗೌಡ ಪಾಟೀಲರ ವ್ಯಕ್ತಿತ್ವ ನೋಡಿ ನಾವು ಜೆಡಿಎಸ್ ಪಕ್ಷವನ್ನು ಸೇರಿದ್ದೇವೆ. ಅವರನ್ನು ಈ ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಲು ಬ.ಸಾಲವಾಡಗಿ ಜಿಪಂ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ ಒದಗಿಸಲಾಗುವದು ಎಂದರು.

ಶ್ರೀಕಾಂತ ದೊಡಮನಿ, ಪ್ರಭುಗೌಡ ದೊಡಮನಿ, ವಿಜಯಕುಮಾರ ಸಾವಳಗಿ, ರಾಜುಗೌಡ ಯಾಳಗಿ, ಮೈಬೂಬ ಬಿಳವಾರ, ಕುಮಾರ ಅನತಂರೆಡ್ಡಿ, ಭೀಮನಗೌಡ ಅನಂತರೆಡ್ಡಿ, ನಾನಾಗೌಡ ಅನಂತರೆಡ್ಡಿ, ಬಸವರಾಜ ಅನಂತರೆಡ್ಡಿ, ಯಾಕೂಬ ದಗರ್ಾ, ಕಾಶು ಜಾಧವ, ಮಡುಸಾಹುಕಾರ ಬಿರಾದಾರ, ಭೀಮನಗೌಡ ತಂಗಡಗಿ, ಸಿದ್ದನಗೌಡ ಪಾಟೀಲ, ರಾಮನಗೌಡ ಪಾಟೀಲ, ಮಲ್ಲಯ್ಯ ಸಾಲಿಮಠ ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ