ಕ್ಯಾನ್ಸರ್ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ: ಪಟ್ಟಣಶೆಟ್ಟಿ
ಲೋಕದರ್ಶನ ವರದಿ
ಮುಂಡಗೋಡ: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೈಕಲ್ ಜಾಥಾ ನಡೆಸುವ ಮೂಲಕ ಮಂಗಳವಾರ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ತಾ.ಪಂ.ಇಒ ಪ್ರವೀಣ ಕಟ್ಟಿ ಜಾಥಾಕ್ಕೆ ಚಾಲನೆ ನೀಡಿದರು. ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ ಕ್ಯಾನ್ಸರ್ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ. ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ರೋಗಗಳನ್ನು ವ್ಯಾಯಾಮದ ಮೂಲಕ ತಾವೇ ಆರೈಕೆ ಮಾಡಿಕೊಳ್ಳುವುದು, ಸೈಕಲ್ ತುಳಿಯುವುದು, ಬಿರುಸು ನಡಿಗೆ, ನಿಧಾನವಾಗಿ ಓಡುವುದು, ಧ್ಯಾನ ಮಾಡುವುದರಿಂದ ನಿಯಂತ್ರಣದಲ್ಲಿ ಇಡಬಹುದು ಎಂದರು.
ಈ ವೇಳೆ ಪಿಎಸ್ಐ ಎನ್.ಡಿ.ಜಕ್ಕಣ್ಣವರ, ದೈಹಿಕ ಶಿಕ್ಷಣಾಧಿಕಾರಿ ಶಿವಮೂರ್ತಿ ಎಚ್.ಆರ್., ಯುವಜನ ಕ್ರೀಡಾಧಿಕಾರಿ ಹನುಮಂತಪ್ಪ ವಡ್ಡರ, ಪ್ರಾಂಶುಪಾಲರಾದ ಪರಶುರಾಮ ಸಿ.ಕೆ., ಜಿ.ಟಿ.ಕಡೇಮಮನಿ, ಎಸ್.ಪಿ.ವಾಗ್ಮೋರೆ, ಎಮ್.ಜಿ.ಪಾಟೀಲ, ಆಡಳಿತ ವೈದ್ಯಾಧಿಕಾರಿ ಡಾ.ಭರತ ಡಿ.ಟಿ., ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಚ್.ಹಿರೇಮಠ, ಹಿರಿಯ ಪ್ರಾಥಮಿಕ ಸಂರಕ್ಷಣಾಧಿಕಾರಿ ಮರಿಯಮ್ಮ, ಆರೋಗ್ಯ ನೀರೀಕ್ಷಣಾಧಿಕಾರಿ ಅಶೋಕ ಎ., ಆಶಾ ಮೇಲ್ವಿಚಾರಕಿ ನಿರ್ಮಲಾ ಲೋಬೋ, ಶಿಕ್ಷಕರಾದ ರಮೇಶ ಪವಾರ, ದೀಪಕ ಲಮಾಣಿ, ಉಲ್ಲಾಸ ಬಿ.ಕೆ., ಎಲ್ಲ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.