ಬಿ.ಎಲ್.ಡಿ.ಇ ಪಾಲಿಟೆಕ್ನಿಕ್ನಲ್ಲಿ ಕ್ಯಾಂಪಸ್ ಸಂದರ್ಶನ: 94 ವಿದ್ಯಾರ್ಥಿಗಳ ಆಯ್ಕೆ
ವಿಜಯಪುರ 18 : ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ನಲ್ಲಿ ಜೂನ್ 16 ಮಂಗಳವಾರ ಮತ್ತು ಜೂನ್ 17 ಬುಧವಾರ ಎರಡು ದಿನ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ 46 ಡಿಪ್ಲೋಮಾ ಮತ್ತು 48 ಐಟಿಐ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಧಾರವಾಡದ ನಿಡೆಕ್ ಸಂಸ್ಥೆ ಮತ್ತು ಬಿ.ಎಲ್.ಡಿ.ಇ ಪಾಲಿಟೆಕ್ನಿಕ್ ಹಾಗೂ ಐಟಿಐ ವತಿಯಿಂದ ಆಯೋಜಿಸಲಾದ ಈ ಕ್ಯಾಂಪಸ್ ಸಂದರ್ಶನದಲ್ಲಿ ನಿಡೆಕ್ ಮುಖ್ಯ ವ್ಯವಸ್ಥಾಪಕ ಸೋಮಶೇಖರ, ವ್ಯವಸ್ಥಾಪಕ ಮಂಜುನಾಥ, ಮಾನವ ಸಂಪನ್ಮೂಲ ವಿಭಾಗದ ಚಂದನಾ ಹಾಗೂ ನಿಶ್ಮಿತಾ ಸಂದರ್ಶನ ನಡೆಸಿದರು. ಈ ಸಂದರ್ಶನದಲ್ಲಿ ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಡಿಪ್ಲೊಮಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗಗಳ ಒಟ್ಟು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ನಾನಾ ಐಟಿಐ ವಿಭಾಗಗಳ 110ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.