ಗೋಕಾಕ್

ಡ್ರಗ್ಸ್ ವಿರುದ್ಧ ಅಭಿಯಾನ ಯಶಸ್ವಿ

ಡ್ರಗ್ಸ್ ವಿರುದ್ಧ ಅಭಿಯಾನ ಯಶಸ್ವಿ

ಘಟಪ್ರಭಾ 29: ಕೆಲವು ತಿಂಗಳುಗಳಿಂದ ಘಟಪ್ರಭಾ ನಗರದಲ್ಲಿ ಗಾಂಜಾ ಮತ್ತು ಡ್ರಗ್ಸ್ ಘಾಟು ಹೆಚ್ಚಾಗಿ ಕೆಲವು ಅಮಾಯಕ ಯುವಕರು ಅಪ್ರಾಪ್ತರು, ವಿದ್ಯಾಥರ್ಿಗಳು ಈ ಡ್ರಗ್ಸ್ ದುಶ್ಚಟಕ್ಕೆ ದಾಸರಾಗಿ ಬಲಿಯಾಗುತ್ತಿರುವುದರಿಂದ ಬುಧವಾರ ಘಟಪ್ರಭಾದಲ್ಲಿ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಡಾ. ಮಲ್ಲಿಕಾಜರ್ುನ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಡ್ರಗ್ಸ್ ವಿರುದ್ಧ ಅಭಿಯಾನಕ್ಕೆ ನಗರದ ಎಲ್ಲಾ ಕಾಲೇಜು ವಿದ್ಯಾಥರ್ಿ ಸಮೂಹಗಳೊಂದಿಗೆ, ರೈತ ಸಂಘ, ಕನ್ನಡಪರ ಸಂಘಟನೆ, ಭಾರತ ಸೇವಾದಳ, ಕೆನರಾ ಬ್ಯಾಂಕ್ ಸೇರಿ ಹಲವಾರು ಸಂಘ-ಸಂಸ್ಥೆಗಳು ಸ್ವಇಚ್ಚೆಯಿಂದ ಆಗಮಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದರು.

  ಘಟಪ್ರಭಾ ನಗರದಲ್ಲಿ ಇದೇ ಪ್ರಥಮ ಬಾರಿಗೆ 4 ಸಾವಿರಕ್ಕೂ ಹೆಚ್ಚು ಜನರು ಇಂತಹ ಒಂದು ಅಭಿಯಾನದಲ್ಲಿ ಭಾಗವಹಿಸಿ ಗಮನ ಸೆಳೆದಿರುವುದು ಇತಿಹಾಸವಾಗಿದೆ. ಎಲ್ಲಿ ನೋಡಿದರಲ್ಲಿ ಡ್ರಗ್ಸ್ ವಿರುದ್ಧ ಘೋಷಣೆ, ಭಿತ್ತಿ ಪತ್ರ ಕಾಣಿಸುತ್ತಿದ್ದು ಎಲ್ಲಾ ಅಂಗಡಿ ಮುಂಗಟ್ಟುುಗಳು ಸ್ವಇಚ್ಚೆಯಿಂದ ಬಂದ್ ಮಾಡಿ ಜಾಗೃತಿ ಜಾಥಾದಲ್ಲಿ ಭಾಗವಹಿಸಿದರು.

  ಕಾರ್ಯಕ್ರಮದ ನೇತೃತ್ವ ವಹಿಸಿದ ಡಾ. ಮಲ್ಲಿಕಾಜರ್ುನ ಮಹಾಸ್ವಾಮಿಗಳು ಮಾತನಾಡಿ ಈ ಗಾಂಜಾ, ಡ್ರಗ್ಸ್ ಸೇವನೆ ದೇಶಕ್ಕೆ ಅತ್ಯಂತ ಮಾರಕ ನಮ್ಮ ದೇಶದ ಸಂಸ್ಕೃತಿಯನ್ನು ಎಲ್ಲ ದೇಶದವರು ಗೌರವಿಸುತ್ತಿದ್ದ ಸಂದರ್ಭದಲ್ಲಿ ಇಂತಹ ಒಂದು ದುಶ್ಚಟ ಇಂದು ನಮ್ಮ ದೇಶದಲ್ಲಿ ವೇಗವಾಗಿ ಹರಡುತ್ತಿದೆ. ಅದು ಈಗ ತಮ್ಮ-ತಮ್ಮ ಮನೆ ಬಾಗಿಲಿಗೆ ಬಂದು ನಿಂತಿದ್ದು ತಮ್ಮ ಮಕ್ಕಳನ್ನು ಅದರಿಂದ ರಕ್ಷಿಸಿಕೊಳ್ಳುವುದೆ ಈ ಸಂದರ್ಭದಲ್ಲಿ ಅತ್ಯಂತ ಮುಖ್ಯವಾಗಿದೆ. 

ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಹೊಣೆಯಾಗಿದೆ ಈ ಡ್ರಗ್ಸ್ ವ್ಯಸನದ ಜಾಲಕ್ಕೆ ಒಮ್ಮೆ ಬಿದ್ದರೆ ಮತ್ತೆ ಅದರಿಂದ ಹೊರ ಬರಲು ಸಾಧ್ಯವಾಗುವುದಿಲ್ಲ ಅದರಿಂದ ಮೆದುಳಿನ ಮೇಲೆ ಪರಿಣಾಮ ಬಿದ್ದು ಆತ ತನ್ನ ಜೀವನವನ್ನೆ ಹಾಳು ಮಾಡಿಕೊಳ್ಳಬೇಕಾಗುತ್ತದೆ. ಇಂದು ಘಟಪ್ರಭಾದಲ್ಲಿ ಯುವಕರು ಗಾಂಜಾ ಮತ್ತು ಡ್ರಗ್ಸ್ ಸೇವನೆಯಲ್ಲಿ ಮುಗ್ನರಾಗಿ ಕೆಲವು ಅಪತ್ತುಗಳನ್ನು ತಂದುಕೊಂಡಿದ್ದಾರೆಂದು ಕೇಳಿ ಬರುತ್ತಿದ್ದು, ಇದರ ಬಗ್ಗೆ ಪ್ರತಿಯೊಬ್ಬರು ಒಂದಾಗಿ ಹೊರಾಟ ಮಾಡೋಣ ಘಟಪ್ರಭಾವನ್ನು ಗಾಂಜಾ, ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡೋಣ ಎಂದು ಹೇಳಿದರು.

    ಮಲ್ಲಾಪೂರ ಲಕ್ಷ್ಮೀ ದೇವರ ಗುಡಿಯಿಂದ ಹೊರಟು ಮೃತ್ಯುಂಜಯ ವೃತ್ತದವರೆಗೆ ಅಭಿಯಾನ ಜಾಥಾ ನಡೆಯಿತು. ವೃತ್ತದಲ್ಲಿ ಕೆಲ ಸಮಯ ರಸ್ತೆ ತಡೆ ಮಾಡಿ ಗಾಂಜಾ ಮತ್ತು ಡ್ರಗ್ಸ್ನಿಂದ ಆಗುವ ಆಪತ್ತಿನ ಬಗ್ಗೆ   ರೈತ ಸಂಘದ ರಾಜ್ಯ ಗೌರವಧ್ಯಕ್ಷರಾಗಿರುವ ಶಶಿಕಾಂತ ಪಡಸಲಗಿ, ರಾಮಣ್ಣ ಹುಕ್ಕೇರಿ, ಸುರೇಶ ಕಾಡದವರ, ಮಡಿವಾಳಪ್ಪ ಮುಚಳಂಬಿ, ಗುರುಬಸಯ್ಯ ಕಪರ್ೂರಪಠ, ಚೂನಪ್ಪ ಪೂಜೇರಿ, ಬಸವರಾಜ ಹಟ್ಟಿಗೌಡರ, ಪುರಸಭೆ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ವಿರೂಪಾಕ್ಷ ದೇವರು ಸೇರಿ ಹಲವರು ಮಾತನಾಡಿದರು. 

ಆರೋಪಿಗಳ ಸುಳಿವು ನೀಡಿ ಸಿಪಿಐ: ಜಾಗೃತಿ ಜಾಥಾದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ, ಘಟಪ್ರಭಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ ಶ್ರೀಶೈಲ ಬ್ಯಾಕೂಡರು, ಘಟಪ್ರಭಾ ನಗರ ಸುತ್ತಮುತ್ತ ಡ್ರಗ್ಸ್ ಮತ್ತು ಗಾಂಜಾ ಮಾರಾಟದ ಬಗ್ಗೆ ನಮಗೆ ಮಾಹಿತಿ ನೀಡಿದಲ್ಲಿ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು 

ಸುದ್ದಿ ಓದಿ