ಗದಗ

ವಾರ್ಷಿಕ ಸಭೆಯಲ್ಲಿ ಸಾಲ ಮರುಪಾವತಿಗೆ ಕರೆ

ವಾರ್ಷಿಕ ಸಭೆಯಲ್ಲಿ ಸಾಲ ಮರುಪಾವತಿಗೆ ಕರೆ

 ಲಕ್ಷ್ಮೇಶ್ವರ  21: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಲ್ಲಿ ವಾರ್ಷಿಕ ಸಭೆ ನಡೆಯಿತು. ಬ್ಯಾಂಕ್ ಅಧ್ಯಕ್ಷರಾದ ಬಿ.ವಿ. ಪಾಟೀಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.  

 ಸಾಲ ಪಡೆದಿರುವ ಎಲ್ಲ ಸದಸ್ಯರು ಸಕಾಲಕ್ಕೆ ಅಸಲು ಮತ್ತು ಬಡ್ಡಿಯನ್ನು ಮರುಪಾವತಿಸುವ ಮೂಲಕ ಬ್ಯಾಂಕ್‌ನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಸದಸ್ಯರು ಸಮಯಕ್ಕೆ ಸಾಲ ಮರುಪಾವತಿಸಿದರೆ ಬ್ಯಾಂಕ್‌ನಿಂದ ಹೆಚ್ಚಿನ ಸಾಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.  

 ನಿರ್ದೇಶಕ ಬಿ.ಎಸ್‌. ಜಾಲಗಾರ ಮಾತನಾಡಿ, ರೈತರು ಟ್ರ್ಯಕ್ಟರ್ ಖರೀದಿ, ವೈಯಕ್ತಿಕ ಹೈನುಗಾರಿಕೆ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಸಮರ​‍್ಕವಾಗಿ ಬಳಸಿಕೊಂಡು ಉತ್ತಮ ಬೆಳವಣಿಗೆ ಸಾಧಿಸಬೇಕು ಮತ್ತು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸಬೇಕು ಎಂದು ಸಲಹೆ ನೀಡಿದರು.   ಸಭೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಎಫ್‌.ವೈ. ಉಚ್ಚಂಗಿ, ನಿರ್ದೇಶಕರು, ಸಿಬ್ಬಂದಿ ಹಾಗೂ ಬ್ಯಾಂಕ್‌ನ ಸದಸ್ಯರು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ