ಮುದ್ದೆಬಿಹಾಲ್

ಸಿ ಎಸ್ ನಾಡಗೌಡ(ಅಪ್ಪಾಜಿ) ಕುಟುಂಬ ಸಮೇತ ಮತದಾನ

ಸಿ ಎಸ್ ನಾಡಗೌಡ(ಅಪ್ಪಾಜಿ) ಕುಟುಂಬ ಸಮೇತ ಮತದಾನ

ಮುದ್ದೇಬಿಹಾಳ 07: ಲೋಕಸಭಾ ಚುನಾವಣೆ ಹಿನ್ನೇಲೆಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ತಮ್ಮ ಧರ್ಮಪತ್ನಿ ಸುವರ್ಣಾ ನಾಡಗೌತಿ, ಪುತ್ರಿ ಪಲ್ಲವಿ ನಾಡಗೌಡ ಅವರು ಸೇರಿದಂತೆ ಕುಟುಂಬ ಸಮೇತ ತಮ್ಮ ಸ್ವಗ್ರಾಮ ತಾಲೂಕಿನ ಬಲದಿನ್ನಿ ಗ್ರಾಮದ ಮತಗಟ್ಟೆ ಸಂಖ್ಯೆ 240 ರಲ್ಲಿ ತಮ್ಮ ಪವಿತ್ರ ಮತ ಚಲಾಯಿಸಿದರು.  

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದೃಡ ಭಾರತದ ದೇಶ ಕಟ್ಟಲು ಇಂದು ಸಂವಿಧಾನ ಬದ್ಧ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದೇನೆ. ದೇಶದದಲ್ಲಿ ಶಾಂತಿ ಸೌಹಾರ್ಧತೆಯಿಂದ ಸಹೋದರತೆಯಿಂದ ಕೂಡಿ ಬಾಳಬೇಕಾದರೇ ಪ್ರಸ್ತುತ ಈ ಚುನಾವಣೆಯು ಬಹಳ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಇದೇ ರೀತಿಯಲ್ಲಿ ದೇಶದ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ನವ ಭಾರತದ ನಿರ್ಮಾಣದ ಸಂಕಲ್ಪದೊಂದಿಗೆ ಎಲ್ಲರೂ ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ಯುವಕರು ಮಹಿಳೆಯರು, ವಯೋವೃದ್ಧರು ಸೇರಿದಂತೆ ಎಲ್ಲ ವರ್ಗದವರೂ ಪ್ರಜಾ ಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನದ ಮಹತ್ವ ಅರಿತು ನಿಮ್ಮ ಮತದ ಹಕ್ಕು ವ್ಯರ್ಥವಾಗದಂತೆ ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದರು. 


ಸುದ್ದಿ ಓದಿ