ಮನರಂಜನೆ

ಚಿತ್ರ ನಟರಿಗೆ ಕೋವಿಡ್ ಲಸಿಕೆ ಅತ್ಯಗತ್ಯ: ಸೋನಿ

ಚಿತ್ರ ನಟರಿಗೆ ಕೋವಿಡ್ ಲಸಿಕೆ ಅತ್ಯಗತ್ಯ: ಸೋನಿ

ಮುಂಬೈ, ಮಾರ್ಚ್ 19: ಈಗಾಗಲೇ ಹಲವು ನಟ ನಟಿಯರು ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆ. ಹಲವರು ಮೃತಪಟ್ಟಿದ್ದಾರೆ.   ಹೀಗಾಗಿ ನಟ-ನಟಿಯರಿಗೆ ಮೊದಲು ಲಸಿಕೆ ನೀಡಿ ಎಂದು ನಟಿ ಸೋನಿ ರಾಜ್ದಾನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. 'ಬಹಳಷ್ಟು ಮಂದಿ ನಟ-ನಟಿಯರು ಕೊರೋನಾ ಸೋಂಕಿಗೆ ಗುರಿಯಾಗುತ್ತಿದ್ದಾರೆ. ನಟ-ನಟಿಯರು ಕೆಲಸದ ವೇಳೆ ಮಾಸ್ಕ್ ಧರಿಸಲು ಆಗುವುದಿಲ್ಲ. ಹಾಗಾಗಿ ಮೊದಲು ಅವರಿಗೆ ಲಸಿಕೆ ನೀಡಬೇಕು' ಎಂದಿದ್ದಾರೆ.ಆದರೆ ಸೋನಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಒಬ್ಬರು, 'ನಟನಾವೃತ್ತಿ ಹೆಚ್ಚು ಕೊರೋನಾ ರಿಸ್ಕ್‌ನಲ್ಲಿರುವ ವೃತ್ತಿಯಲ್ಲ' ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೋನಿ, 'ನಟನೆ ಒಂದು ವೃತ್ತಿ. ಬದುಕಲು ಅವರೂ ಸಹ ದುಡಿಯಲೇ ಬೇಕು. ಬೇರೆ ವೃತ್ತಿಯವರು ಕೆಲಸ ಮಾಡಬೇಕಾದರೆ ಮಾಸ್ಕ್ ಧರಿಸಬಹುದು. ಆದರೆ ನಟ-ನಟಿಯರು ಧರಿಸಲು ಸಾಧ್ಯವಿಲ್ಲ' ಎಂದಿದ್ದಾರೆ. ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ರಣ್ಬೀರ್ ಕಪೂರ್, ಆಲಿಯಾ ಭಟ್, ಮನೋಜ್ ಬಾಜಪೇಯಿ, ಸಿದ್ಧಾರ್ಥ್ ಚತುರ್ವೇದಿ ಇನ್ನೂ ಹಲವಾರು ಬಾಲಿವುಡ್ ಮಂದಿಗೆ ಕೊರೋನಾ ಸೋಂಕು ತಗುಲಿತ್ತು.

  


ಸುದ್ದಿ ಓದಿ