ಬಳ್ಳಾರಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಐಟಿಯು ಒತ್ತಾಯ

ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಐಟಿಯು ಒತ್ತಾಯ

ಬಳ್ಳಾರಿ 25 : ಬಳ್ಳಾರಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ ಹಾಗೂ ಸ್ವಚ್ಛತಗಾರರ ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮಪಂಚಾಯತಿ ನೌಕರರ ಸಂಘವತಿಂದ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು. 

ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ವೇತನ ನೀಡುತ್ತಿಲ್ಲ, ಹಣವನ್ನು ಸಿಬ್ಬಂದಿ ವೇತನಕ್ಕೆ ಬಳಸದೇ ಬೇರೆಯದಕ್ಕೆ ಬಳಕೆ ಮಾಡುತ್ತಿದ್ದಾರೆ. ಬಾಕಿ ವೇತನ ತೆರಿಗೆ ವಸೂಲಾತಿಯಲ್ಲಿ ಶೇ40%ರಲ್ಲಿ ಸಿಬ್ಬಂದಿ ವೇತನ ನೀಡಬೇಕು. 2021ರ ಜೇಷ್ಠತಾ ಪಟ್ಟಿ ತಯಾರಿಸಬೇಕು.  ಜಿಲ್ಲೆಯಲ್ಲಿ eಈms ನಲ್ಲಿ  ಕೈಬಿಟ್ಟವರನ್ನು ಸೇರಿಸಿಬೇಕು. ಅಕ್ರಮ ನೇಮಕಾತಿ ತಡೆಗಟ್ಟಬೇಕು ಮತ್ತು ಈಗಾಗಲೇ ನೇಮಕಾತಿಯಾದವರ ಮೇಲೆ ನೇಮಕಾತಿಗೆ ಕಾರಣವಾದವರ ಮೇಲೆ ಶಿಸ್ತು ಕ್ರಮ ಕೈಗೋಳ್ಳಬೇಕು. ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಅನುಕಂಪ ಆಧಾರದಲ್ಲಿ ನೇಮಕಾತಿ ನೀಡವಲ್ಲ್ಲಿ ವಿಳಂಭ ಮಾಡುತ್ತಿರುವುದು ಸರಿಯಲ್ಲ ಮತ್ತು ಸರ್ಕಾರದ ನಿರ್ದೇಶನ ಇದ್ದರು ಕೂಡ ಸರ್ಕಾದ ಆದೇಶಗಳನ್ನು ಪಾಲಿಸದ ಪಿ.ಡಿ.ಓಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ನೌಕರರ ಈ ಕೆಳಗಿನ ಬೇಡಿಕೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು. 

ಈ ವೇಳೆ ಅಧ್ಯಕ್ಷರು ಆರ್.ಎಸ್. ಬಸವರಾಜ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ,  ಸೇರಿದಂತೆ ಮತ್ತಿತರು ಹಾಜರಿದ್ದರು.

ಸುದ್ದಿ ಓದಿ