ರಶ್ಮಿಕಾ ಬಣ್ಣ ಹಚ್ಚಿದ ಬಾಲಿವುಡ್ ನ 'ಟಾಪ್ ಟಕ್ಕರ್' ಆಲ್ಬಂ ಬಿಡುಗಡೆ
ಬೆಂಗಳೂರು, ಫೆ.12: ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದು, ಅದಾಗಲೇ ಜಗಜಾಹೀರು ಆಗಿದೆ. ಇದೀಗ ರಶ್ಮಿಕಾ ಹೆಜ್ಜೆ ಹಾಕಿರುವ ಬಾಲಿವುಡ್ ಪ್ರಥಮ ಆಲ್ಬಂ 'ಟಾಪ್ ಟಕ್ಕರ್' ಶುಕ್ರವಾರ ಬೆಳಿಗ್ಗೆ ಬಿಡುಗಡೆಗೊಂಡಿದೆ. ವಾಯ್ ಆರ್ ಎಫ್ ಯೂಟ್ಯೂಬ್ ಚಾನೆಲ್ನಲ್ಲಿ ಈ ಆಲ್ಬಂ ಬಿಡುಗಡೆಗೊಂಡಿದ್ದು, ರಿಲೀಸ್ ಆದ 1 ಗಂಟೆ ಒಳಗೆ ಸುಮಾರು 4 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.ಬಾಲಿವುಡ್ನ ಪ್ರಖ್ಯಾತ ರ್‍ಯಾಪರ್ ಬಾದ್ ಷಾ, ಉಚಾನಾ ಅಮಿತ್, ರಶ್ಮಿಕಾ ಮಂದಣ್ಣ ಈ ಟಾಪ್ ಟಕ್ಕರ್ ಹಾಡಿಗೆ ಸ್ಟೇಪ್ ಹಾಕಿದ್ದಾರೆ.ಚಂಢೀಘಡದಲ್ಲಿ ಈ ಆಲ್ಬಂ ಚಿತ್ರೀಕರಣಗೊಂಡಿದ್ದು ರಶ್ಮಿಕಾ ವಿಭಿನ್ನ ವಿನ್ಯಾಸದ ಕಾಸ್ಟ್ಯೂಮ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.ಯಶ್ ರಾಜ್ ಫಿಲ್ಮ್ಸ್ ಈ ಹಾಡನ್ನು ನಿರ್ಮಾಣ ಮಾಡಿದೆ.ಈ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.ಇನ್ನು, ಬಾಲಿವುಡ್ ನ ಸಿನಿಮಾದಲ್ಲೂ ಖಾತೆ ತೆಗೆದಿರುವ ರಶ್ಮಿಕಾ, ಸಿದ್ದಾರ್ಥ್ ಮಲ್ಹೋತ್ರಾ ಅವರೊಂದಿಗೆ 'ಮಿಷನ್ ಮಜ್ನು' ಚಿತ್ರದಲ್ಲಿ ರೊಮ್ಯಾನ್ಸ್ ಮಾಡಲಿದ್ದಾರೆ. ಗುರುವಾರವಷ್ಟೇ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ.