ಮನರಂಜನೆ

ಕಲಬುರಗಿಯಲ್ಲಿ ಶೀಘ್ರವೇ ಒಂದು ಸಿನಿಮಾ ಚಿತ್ರೀಕರಣ: ನಟ ಪುನೀತ್ ರಾಜ್ ಕುಮಾರ್

ಕಲಬುರಗಿಯಲ್ಲಿ ಶೀಘ್ರವೇ ಒಂದು ಸಿನಿಮಾ ಚಿತ್ರೀಕರಣ: ನಟ ಪುನೀತ್ ರಾಜ್ ಕುಮಾರ್

ಕಲಬುರಗಿ, ಮಾ.21 :ನಗರದಲ್ಲಿ ಅತೀ ಶೀಘ್ರ ಒಂದು ಚಲನಚಿತ್ರ ಶೂಟಿಂಗ್ ‌ಮಾಡಲಿದ್ದೇವೆ ಎಂದು ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಿಳಿಸಿದರು.'ಯುವರತ್ನ' ಚಲನಚಿತ್ರ ಪ್ರಚಾರಕ್ಕಾಗಿ ನಗರದ ಶರಣಬಸವೇಶ್ವರ ದೇವಸ್ಥಾನಕ್ಕೆ ಬಂದಿದ್ದ  ಪುನೀತ್ ರಾಜಕುಮಾರ್ ಅವರನ್ನು ಅಭಿಮಾನಿಗಳು ಜೆಸಿಬಿ ಮೇಲೆ ನಿಂತು ಪುಷ್ಪ ವೃಷ್ಟಿ ಮಾಡುವ ಮೂಲಕ ಬರಮಾಡಿಕೊಂಡರು.ನಂತರ ಭೇಟಿಯಾಗಲು ಬಂದಿದ್ದ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಪುನೀತ್, ಕಲಬುರಗಿಯಲ್ಲಿ ಶೀಘ್ರವೇ ಒಂದು ಸಿನಿಮಾ ಚಿತ್ರೀಕರಣ ಮಾಡಲಾಗುವುದು. ಸಿನಿಮಾದ ಹೆಸರನ್ನು ಶೀಘ್ರವೇ ಬಹಿರಂಗ ಪಡಿಸಲಿದ್ದೇವೆ ಎಂದು ಹೇಳಿದರು.ಕಲಬುರಗಿ ನನಗೆ ಹೊಸದೇನೂ ಅಲ್ಲ. ಸುಮಾರು ಬಾರಿ ಇಲ್ಲಿಗೆ ಬಂದಿದ್ದು, ಅಪ್ಪಾಜೀ ಡಾ.ರಾಜಕುಮಾರ್ ಅವರ ಕಾಲದಿಂದಲೂ ನನಗೆ ಈ ನಗರದೊಂದಿಗೆ ಒಡನಾಟವಿದೆ ಎಂದು ತಿಳಿಸಿದರು.ಗುಲಬರ್ಗಾ ಕಲಬುರಗಿ ಆಗಿ ಬದಲಾದ ನಂತರ ಹೈದರಾಬಾದ್- ಕರ್ನಾಟಕ, ಕಲ್ಯಾಣ ಕರ್ನಾಟಕ ಆದ ನಂತರ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದೇನೆ ಎಂದು ಅವರು ನಗೆ ಬೀರಿದರು.ಈ ಸಂದರ್ಭದಲ್ಲಿ ನಟರಾದ ಡಾಲಿ ಧನಂಜಯ, ರವಿಶಂಕರ್, ನಿರ್ದೇಶಕ ಸಂತೋಷ ಆನಂದರಾಮ್, ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಬಿಜೆಪಿ ಮುಖಂಡ ನಿತಿನ್ ಗುತ್ತೇದಾರ ಸೇರಿ ಮತ್ತಿತರಿದ್ದರು.ಚಿತ್ರದ ಪ್ರಚಾರಕ್ಕಾಗಿ ನಗರದ ಏಷಿಯನ್ ಮಾಲ್ ಬಳಿ ಶಾಮಿಯಾನ ಹಾಕಲಾಗಿತ್ತು. ಆದರೆ, ಕೋವಿಡ್-19 ಸೋಂಕು ಹರಡುತ್ತಿರುವುದರಿಂದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಕಾರ್ಯಕ್ರಮಕ್ಕೆ ಅನುಮತಿ ನೀಡಲು ನಿರಾಕರಿಸಿದರು.


ಸುದ್ದಿ ಓದಿ