ರಾಷ್ಟ್ರೀಯ ಕಬಡ್ಡಿ ಪಂದ್ಯಕ್ಕೆ ಸಿ.ಹೆಚ್.ಅಭಿಷೇಕ್ ಆಯ್ಕೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ11 : ತಾಲೂಕಿನ ಉಪನಾಯಕನಹಳ್ಳಿ ಗ್ರಾಮದ ಸಿ.ಹೆಚ್ ಅಭಿಷೇಕ್ ಮೇ 5ರಂದು ನೇಪಾಳದಲ್ಲಿ ನಡೆಯುವ ರಾಷ್ಟ್ರೀಯ ಕಬಡ್ಡಿ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.
ಚಿಕ್ಕಮಂಗಳೂರಿನಲ್ಲಿ ಏ. 6,7ರಂದು ನ್ಯಾಷನಲ್ ಯೂತ್ ಸ್ಪೋರ್ಟ್ ಆಂಡ್ ಎಜುಕೇಶ್ನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕ್ರಿಡಾಪಟುವಾಗಿ ಬಾಗವಹಿಸಿ ನೀಡಿದ ಉತ್ತಮ ಪ್ರದರ್ಶನ ನೀಡಿ ತಮ್ಮ ತಂಡಕ್ಕೆ ಜಯದ ಮಾಲೆ ಲಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಂಡು ಮೇ 1ರಿಮದ 5ರ ವರೆಗೆ ನೇಪಾಳದಲ್ಲಿ ನಡೆಯುವ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದು ಗ್ರಾಮದ ಗ್ರಾಮಸ್ಥರು ಸೇರಿದಂತೆ ಆಪ್ತರು ಅಭಿನಂದನೆ ತಿಳಿಸಿದ್ದಾರೆ.