ಪೌಷ್ಠಿಕಾಂಶ ಆಹಾರ ಸಿಡಿಪಿಒ ನಾಗರಾಜ್ ಹಠಾತ್ ಭೇಟಿ: ಪರೀಶೀಲನೆ
ಬಳ್ಳಾರಿ 11: ಬಳ್ಳಾರಿ ನಗರದ 9ನೇ ವಾರ್ಡ್‌ನ, ಸೊಸೈಟಿ ರೈಸ್‌ಮಿಲ್‌ನ ಅಂಗನವಾಡಿ ಕೇಂದ್ರಕ್ಕೆ ದಿ. 10ರಂದು ವಾರ್ಡ್‌ನ ಮಹಾನಗರ ಪಾಲಿಕೆ ಸದಸ್ಯ ಜಬ್ಬಾರ್‌ಸಾಬ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ನಾಗರಾಜ್‌ಹಠಾತ್ ಭೇಟಿ ನೀಡಿ ಮಕ್ಕಳಿಗೆ ನೀಡುವ ಪೌಷ್ಠಿಕಾಂಶ ಆಹಾರವನ್ನು ಪರೀಕ್ಷಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರ ಕಾರ್ಯಕರ್ತರಾದ ನಾಗವೇಣಿಯವರು ಪೌಷ್ಟಿಕಾಂಶ ವಿತರಣೆಯಲ್ಲಿ ಲೋಪವೆಸಿಗಿದ್ದು ಕಂಡು ಬಂದಿರುತ್ತದೆ. ಮಕ್ಕಳಿಗೆ ಸರಿಯಾಗಿ ವಿತರಣೆ ಮಾಡದೇ ಪೌಷ್ಟಿಕಾಂಶ ಯುಕ್ತ ಆಹಾರವಾದ ಬೇಳೆ, ಬೆಲ್ಲ, ಮೊಟ್ಟೆ, ಹಾಲಿನಪುಡಿ ಸೇರಿದಂತೆ ಇತರ ಆಹಾರವನ್ನು ಹೊರಗಡೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.ಅಂಗನವಾಡಿ ವ್ಯಪ್ತಿಯ ಸಾರ್ವಜನಿಕರಿಗೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್‌ಗಳನ್ನು ಇಲಾಖೆಯಿಂದ ಮಾಡಿಸಿಕೊಡಲು ಸಾವಿರಾರು ರೂಪಾಯಿಗಳ ಲಂಚವನ್ನು ಪಡೆದುಕೊಳ್ಳುತ್ತಾರೆಂದು ದೂರಿದರು. ಈ ದೂರನ್ನು ಆಲಿಸಿದ ಸಿ.ಡಿ.ಪಿ.ಒ ರವರು, ಮಕ್ಕಳಿಗೆ ಆಹಾರವನ್ನು ಕೊಡುವುದರ ಜೊತೆಗೆ ಸರಿಯಾಗಿ ಕೆಲಸ ಮಾಡುವಂತೆ ತಾಕೀತು ಮಾಡಿದರು. ಮತ್ತೊಂದು ಸಲ ದೂರು ಬಂದಲ್ಲಿ ಅಥವಾ ಕರ್ತವ್ಯ ಲೋಪ ಕಂಡುಬಂದಲ್ಲಿ ಅಮಾನತ್ತು ಮಾಡುವುದಾಗಿ ಅಂಗನವಾಡಿ ಕಾರ್ಯಕರ್ತೆ ನಾಗವೇಣಿಯವರಿಗೆ ವಾರ್ನಿಂಗ್ ಕೊಟ್ಟು ಹೋಗಿರುತ್ತಾರೆ.
ಈ ಸಂದರ್ಭದಲ್ಲಿ 9ನೇ ವಾರ್ಡ್‌ನ ಪಾಲಿಕೆ ಸದಸ್ಯರಾದ ಜಬ್ಬಾರ್‌ಸಾಬ್, ಅಂಗನವಾಡಿ ಮೇಲ್ವಿಚಾರಕರಾದ ಮಂಜುಳಾ, ಎಸ್.ಆರ್.ಪಿ ಕಾಲೋನಿ ನಾಗರಾಜ್, ಶ್ರೀನಿವಾಸ್, ಕರವೇ ಈಶ್ವರ್, ಫಾರೂಕ್, ಇರ್ಫಾನ್, ಸದ್ಧಾಮ್ ಸೇರಿದಂತೆ ಸ್ಥಳೀಯ ಸಾರ್ವಜನಿಕರು ಇದ್ದರು.