ಬಳ್ಳಾರಿ

ಎಬಿವಿಪಿ ಸಂಘಟನೆ ವಿವೇಕಾನಂದರ ಜಯಂತಿ

ಎಬಿವಿಪಿ ಸಂಘಟನೆ ವಿವೇಕಾನಂದರ ಜಯಂತಿ

ಬಳ್ಳಾರಿ 13: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಳ್ಳಾರಿ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಜಯಂತಿಯನ್ನು ಬಳ್ಳಾರಿ ವಿಭಾಗ ಕಾರ್ಯಾಲಯ ಮತ್ತು ನಗರದ ವಿವಿಧ ಕಾಲೇಜುಗಳಲ್ಲಿ ಆಚರಿಸಲಾಯಿತು. 

ಆಧ್ಯಾಪಕರಾದ ರಾಜಶೇಖರ್ ಮಾತನಾಡಿ ಸ್ವಾಮಿ ವಿವೇಕಾನಂದರು ವಿಶ್ವ ಕಂಡ ಶ್ರೇಷ್ಠ ಸಂತ ಹಾಗೂ ಭಾರತದ ಪರಂಪರೆ ಮತ್ತು ಇತಿಹಾಸವನ್ನು ವಿಶ್ಚಕ್ಕೆ ಉಣಬಡಿಸಿದ ಮಹಾನ್ ಚೇತನ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾದದು ಎಂದರು. 

ನಗರದ ನಾರಾಯಣ ಪಿ.ಯು. ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಎಸ್.ಜಿ. ಕಾಲೇಜು, ವೀರಶೈವ ಕಾಲೇಜು ಮತ್ತು ನಗರದ ವಸತಿ ನಿಲಯಗಳಾದ ಚೈತನ್ಯ ಬಾಲಕಿಯರ ವಸತಿ ನಿಲಯ, ತಾಂತ್ರಿಕ ವಸತಿ ನಿಲಯಗಳಲ್ಲಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.

ವಿಭಾಗ ಪ್ರಮುಖರಾದ ಡಾ. ದೊಡ್ಡಬಸವನಗೌಡ, ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ ಪರಿಷತ್ತಿನ ನಗರ ಸಂಘಟನಾ ಕಾರ್ಯದರ್ಶಿ ಕೌಶಿಕ್, ವಿಭಾಗ ಸಹಸಂಚಾಲಕರಾದ ಹರ್ಷನಾಯ್ಕ್, ತಾಲೂಕು ಸಂಚಾಲಕರಾದ ಸುರೇಶ್ ಬಡಿಗೇರ್, ನಗರ ಸಹಕಾರ್ಯದರ್ಶಿಯಾದ ವಿನೋದ್ ಕುಮಾರ್, ವಿಭಾಗ ವಿದ್ಯಾರ್ಥಿನಿ ಪ್ರಮುಖ್ ಕುಮಾರಿ ಸೃಷ್ಠಿ, ಜಿಲ್ಲಾ ಸಂಚಾಲಕರಾದ ನವೀನ್ ಕುಮಾರ್, ನಗರ ಸಹಕಾರ್ಯದರ್ಶಿ ಹೇಮಾವತಿ, ಕಾರ್ಯಾಲಯ ಕಾರ್ಯದರ್ಶಿ ಮನೋಜ್ ಕುಮಾರ್, ಮತ್ತಿತರ ಕಾರ್ಯಕರ್ತರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ