ಬಳ್ಳಾರಿ

ಪದವಿ ವಿದ್ಯಾರ್ಥಿಗಳಿಗೆ ಸಿಬಿಸಿಎಸ್ ತರಬೇತಿ

ಪದವಿ ವಿದ್ಯಾರ್ಥಿಗಳಿಗೆ ಸಿಬಿಸಿಎಸ್ ತರಬೇತಿ

ಬಳ್ಳಾರಿ 10: ಕನ್ನಡ ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ `ಆಯ್ಕೆ ಆಧಾರಿತ ಗುಣಾಂಕ ಪದ್ಧತಿ’ (ಸಿಬಿಸಿಎಸ್) ತರಬೇತಿ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯುಎಸಿ)ದಿಂದ ಫೆ.09ರಂದು ನಡೆಸಲಾಯಿತು. ತುಮಕೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥರು, ಐಕ್ಯುಎಸಿಯ ನಿರ್ದೇಶಕರೂ ಆದ ಪ್ರಾಧ್ಯಾಪಕ ಡಾ.ಕೆ.ಜಿ. ಪರುಶುರಾಮ ಇವರು ಸಂಪನ್ಮೂಲ ವಿದ್ವಾಂಸರಾಗಿ ಭಾಗವಹಿಸಿದರು.  ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಬಿಸಿಎಸ್  ಪಠ್ಯಕ್ರಮ ಹಾಗೂ ಗ್ರೇಡಿಂಗ್ ಸಿಸ್ಟಂ ಬಗೆಗೆ ಮಾಹಿತಿಗಳನ್ನು ಆಧರಿಸಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಿಬಿಸಿಎಸ್ ಬಗೆಗೆ ತಿಳುವಳಿಕೆ ನೀಡಿದರು. ವಿದ್ಯಾರ್ಥಿಗಳು ಪ್ರಶ್ನೆ-ಉತ್ತರಗಳ ವಿಧಾನದಲ್ಲಿ ಮಾಹಿತಿ ಪಡೆದುಕೊಂಡು ತರಬೇತಿ ಪ್ರಯೋಜನೆ ಪಡೆದರು. ತರಬೇತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮಹಿಳಾ ಅದ್ಯಯನ, ದೃಶ್ಯಕಲೆ, ಸಂಗೀತ ಮತ್ತು ಯೋಗ ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಐಕ್ಯುಎಸಿ ನಿರ್ದೇಶಕ ಡಾ. ಎ.ಮೋಹನ ಕುಂಟಾರ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು ಐಕ್ಯುಎಸಿ ಸಹಾಯಕ ನಿರ್ದೇಶಕ ಡಿ. ಪ್ರಭಾ ಅವರ ವಂದಾನಾರ್ಪಣೆ ಮಾಡಿದರು.


ಸುದ್ದಿ ಓದಿ