ಬಳ್ಳಾರಿ

ರಸ್ತೆ ಸಂಪರ್ಕವಿರುವ ಪ್ರತಿಗ್ರಾಮಕ್ಕೂ ಬಸ್ ಸೌಕರ್ಯ: ಸಚಿವ ಶ್ರೀರಾಮುಲು

ರಸ್ತೆ ಸಂಪರ್ಕವಿರುವ ಪ್ರತಿಗ್ರಾಮಕ್ಕೂ ಬಸ್ ಸೌಕರ್ಯ: ಸಚಿವ ಶ್ರೀರಾಮುಲು

ಬಳ್ಳಾರಿ 26: ಬಳ್ಳಾರಿಯಿಂದ ಹುಬ್ಬಳ್ಳಿಗೆ ವಿಶೇಷ ಬಸ್(ಬಳ್ಳಾರಿಯಿಂದ ಕುರುಗೋಡು-ಎಮ್ಮಿಗನೂರು-ಕಂಪ್ಲಿ-ಗಂಗಾವತಿ-ಕೊಪ್ಪಳ-ಗದಗ-ಹುಬ್ಬಳ್ಳಿ)ಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಎಮ್ಮಿಗನೂರು ಬಸ್ ನಿಲ್ದಾಣದಲ್ಲಿ ಶನಿವಾರ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಿದೆ ಎಂದರು. 

ಪ್ರತಿಹಳ್ಳಿಗೂ ಮತ್ತು ರಸ್ತೆ ಸಂಪರ್ಕವಿರುವ ಪ್ರತಿ ಗ್ರಾಮಕ್ಕೂ ಬಸ್‌ಸೌಕರ್ಯ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ; ಸಾರಿಗೆ ಇಲಾಖೆಯಲ್ಲಿ ಹೊಸ ಬದಲಾವಣೆ ತರುವ ಕೆಲಸ ಮಾಡಲಾಗುತ್ತಿದೆ ಮತ್ತು ಇಲಾಖೆಯನ್ನು ಲಾಭದಾಯಕವನ್ನಾಗಿಸುವ ನಿಟ್ಟಿನಲ್ಲಿ ನಾನಾಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಜೆ. ಶಾಂತಾ, ಮಾಜಿ ಶಾಸಕ ಸುರೇಶಬಾಬು, ವಾಮದೇವ ದೇಶಿಕೇಂದ್ರ ಶಿವಾಚಾರ್ಯರು, ಎನ್‌ಇಕೆಎಸ್‌ಆರ್‌ಟಿಸಿ ಡಿಟಿಒ ಚಂದ್ರಶೇಖರಯ್ಯ, ಎನ್‌ಇಕೆಎಸ್‌ಆರ್‌ಟಿಸಿ ಡಿಎಂಎ ಮತ್ತು ಆಡಳಿತಾಧಿಕಾರಿಗಳು, ಘಟಕ ವ್ಯವಸ್ಥಾಪಕರು ಸೇರಿದಂತೆ ಮುಖಂಡರು ಹಾಗೂ ಇತರರು ಇದ್ದರು. 


ಸುದ್ದಿ ಓದಿ