ಬೌದ್ಧ ಪೂರ್ಣಿಮಾ ಮಾ: ಸೋಂಕಿತರಿಗೆ ಹಣ್ಣು ವಿತರಣೆ
ಚಿಕ್ಕೋಡಿ: ತಥಾಗತ ಭಗವಾನ ಬುದ್ದರ ಆದರ್ಶಗಳನ್ನು ನಾವೆಲ್ಲಾ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಹಾವೀರ ಮೋಹಿತೆ ಹೇಳಿದರು. ಬುಧವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಬುದ್ಧ ಪೂಣರ್ಿಮಾ ನಿಮಿತ್ಯವಾಗಿ ಹಣ್ಣು-ಹಂಪಲ ಹಾಗೂ ಪೌಷ್ಟಿಕಾಂಶವುಳ್ಳ ಆಹಾರ ವಿತರಣೆ ಮಾಡಿ ಮಾತನಾಡಿದ ಅವರು, ಬೌದ್ಧಧರ್ಮಕ್ಕೆ ತನ್ನದೆಯಾದ ಇತಿಹಾಸವಿದೆ. ಅದನ್ನು ಇಂದಿನ ಯುವಶಕ್ತಿಗೆ ತಿಳಿಸಬೇಕಾಗಿದೆ. ಪ್ರತಿ ವರ್ಷ ಬೌಧ್ದ ಪೂಣರ್ೆಮೆ ನಿಮಿತ್ಯವಾಗಿ ಅನ್ನದಾನ ಹಾಗೂ ಆಹಾರ ಹಾಗೂ ಬಟ್ಟೆ ದಾನ ಮಾಡುತ್ತಾ ಬರಲಾಗಿದೆ. ಇದೀಗ ಹೆಮ್ಮಾರಿ ಕೊರೊನಾ ಇರುವದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಒಂದು ಸಾವಿರ ಜನರಿಗೆ ಹಣ್ಣುಗಳನ್ನು ದಾನ ಮಾಡಲಾಗುತ್ತಿದೆ ಎಂದರು.
ಹೆಮ್ಮಾರಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ನಾವೆಲ್ಲಾ ಒಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು. ನಾಗರಮುನ್ನೋಳ್ಳಿ ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಮಹಾವೀರ ಮೊಹಿತೆ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಅನ್ನದಾನ ಮಾಡುತ್ತಾ ಬಂದಿದ್ದಾರೆ. ಭಗವಾನ ಬುದ್ದರ ಆದರ್ಶಗಳನ್ನು ಇಂದಿನ ಯುವಕರಿಗೆ ತಿಳಿಸುವ ಕಾರ್ಯವಾಗಬೇಕಾಗಿದೆ ಎಂದರು. ಸಮಾಜದಲ್ಲಿ ಆಥರ್ಿಕವಾಗಿ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿರುವದು ಹೇಮ್ಮೆ ಸಂಗತಿ ಎಂದರು. ತಾಲೂಕ ಪಂಚಾಯತ ಸದಸ್ಯ ರಾಜು ಪಾಟೀಲ,ರಾಜು ಕೋಟಗಿ, ಸಾಬೀರ ಪಟೇಲ,ಗಣೇಶ ಮೋಹಿತೆ, ಪಿಎಸ್ಐ ಅಶೋಕ ಕುಳ್ಳೂರ, ಡಾ.ಸಂತೋಷ ಕೊಣ್ಣೂರೆ, ಹಾಗೂ ಅಂಬೇಡ್ಕರ ಹಾಗೂ ಬುಧ್ದ ನಗರದ ಹಿರಿಯರು ,ಮಹಾವೀರ ಮೋಹಿತೆ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು. ಚಿಕ್ಕೋಡಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಬೌದ್ಧ ಪೂಣರ್ಿಮಾ ನಿಮಿತ್ಯವಾಗಿ ಕಾಂಗ್ರೆಸ್ ಮುಖಂಡ ಮಹಾವೀರ ಮೋಹಿತೆ ಅವರು ಕೊರೊನಾ ಸೋಂಕಿತರಿಗೆ ಹಣ್ಣು ವಿತರಣೆ ಮಾಡಿದರು