ಬುದ್ದ ಪೂರ್ಣಿಮೆ ಆಚರಣೆ
ಹುನಗುಂದ; ಜಗತ್ತನ್ನೇ ಬೆಚ್ಚಿ ಬೀಳಿಸಿದ ಮಹಾಮಾರಿ ಕೊರೊನಾ ವಾಸಿಗೆ ದಿವ್ಯ ಓಷಧಿಯೆಂದರೆ ಧ್ಯಾನ, ಮನಸ್ಸಿನ ಸಮತೋಲನ ಅದರ ಕುರಿತು ಗೌತಮ ಬುದ್ದರು ಸುಮಾರು ಎರಡುವರೆ ಸಾವಿರ ವರ್ಷಗಳ ಹಿಂದೆ ಹೇಳಿದ್ದು ಇಂದು ಸತ್ಯವಾಗುತ್ತಿದೆ. ಮನುಷ್ಯನ ಮಾನಸಿಕ ಕಿನ್ನತೆಯಿಂದ ಜೀವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಚಾಲಕ ಪರಶುರಾಮ ನೀಲನಾಯಕ ಹೇಳಿದರು.
ಸಮೀಪದ ಚಿಟ್ಟಿಗನಕೊಪ್ಪ ಗ್ರಾಮದ ಬಳಿ ಇರುವ ಬುದ್ದ ಬೂಮಿಯಲ್ಲಿ 2565 ನೆಯ ಬುದ್ದ ಪೂರ್ಣಿಮೆಯನ್ನು ಸರಳವಾಗಿ ಆಚರಿಸಿ ಮಾತನಾಡಿದ ಅವರು ಆಸೆಯೇ ದುಃಖಕ್ಕೆ ಮೂಲ.ಪ್ರೀತಿಯ ಮೂಲಕ ಇಡೀ ಜಗತ್ತನ್ನು ಜಯಸಬೇಕು ಎನ್ನುವುದ್ದನ್ನು ಹೇಳಿಕೊಟ್ಟ ಮಹಾನ ಮಾನವತಾವಾದಿ ಗೌತಮ ಬುದ್ದರನ್ನು ಲೋಕವೇ ಸ್ಮರಿಸುವ ದಿನ.ಸ29 ನೆಯ ವಯಸ್ಸಿನಲ್ಲಿ ಸತ್ಯವನ್ನು ಹುಡುಕುತ್ತಾ ವಿಶ್ವ ಪರ್ಯಟನೆ ಕೈಕೊಂಡು ಬಡವರಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು ಮಹಾನ ಜ್ಞಾನಿ,ಮೋಕ್ಷ ಸಾಧನೆಗೆ ಶಾಂತಿ ಮತ್ತು ಕರುಣೆ ಮುಖ್ಯ ಎಂದರು ಅವರ ಮಾರ್ಗದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಹಜ್ಜೆ ಹಾಕಿ ಪ್ರಪಂಚಕ್ಕೆ ಮಾದರಿಯಾದ ಸಂವಿಧಾನವನ್ನು ನೀಡಿದರು.ಅದರ ನೆರಳಲ್ಲಿ ಅದೆಷ್ಟೋ ಶೋಷಿತ ಸಮುದಾಯಗಳು ಸಮಾಜದಲ್ಲಿ ಶೈಕ್ಷಣಿಕ,ಸಾಮಾಜಿಕ,ಆರ್ಥಿಕ,ರಾಜಕೀಯ ಅಭಿವೃದ್ದಿ ಕಾಣಲು ಸಾಧ್ಯವಾಗಿದೆ.ಬುದ್ದನೆಂಬ ದಿವ್ಯ ಬೆಳಕು ನೊಂದವರಿಗೆ,ಬೆಂದವರಿಗೆ ಸದಾಕಾಲ ತಂಪನ್ನು ಎರೆಯುವ ಹೂನಗೆಯಾಗಿದೆ.ಬುದ್ದ ಸನ್ಮಾರ್ಗದಲ್ಲಿ ಅನೇಕ ಮಹಾರಾಜರು ನಡೆದು ತೋರಿಸಿದ ಇತಿಹಾಸ ನಮ್ಮಲ್ಲಿವೆ.ಬುದ್ದ ಒಂದು ವೇಳೆ ಜನಿಸದಿದ್ದರೇ ಸತ್ಯದ ಅರಿವು ಕಾಣಲು ಸಾಧ್ಯವಿರುತ್ತಿರಲಿಲ್ಲ.ಗೌತಮ ಬುದ್ದರು ಕಾಯಕದಲ್ಲಿ ಸ್ವರ್ಗ,ನರಕ,ಪಾಪಾ,ಪುಣ್ಯ ಕಾಣುವ ಪರಿಯನ್ನು ತಿಳಸಿದ ದಾರ್ಶನಿಕರು.ಬುದ್ದನ ಸತ್ಯದ ನುಡಿಯಿಂದ ಸ್ಪೂರ್ತಿ ಪಡೆದ ಡಾ.ಬಾಬಾಸಾಹೇಬ ಅಂಬೇಡ್ಕರ ಕೊನೆಯಲ್ಲಿ ಬೌದ್ದ ಧರ್ಮವನ್ನು ಸ್ವೀಕರಿಸಿದರು ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮುತ್ತಣ್ಣ ಚಲವಾದಿ,ತುಳಜಾರಾಮ ನೀಲನಾಯಕ,ಮಲ್ಲಿಕಾರ್ಜುನ ಹೊಸಮನಿ,ಬಸವರಾಜ ವಾಲೀಕಾರ,ಬಸವರಾಜ ಮಾಸ್ತಿಹಾಳ ಸೇರಿದಂತೆ ಅನೇಕರು ಇದ್ದರು.