ಉದ್ಯಾನವನ ನಿರ್ಮಾಣಕ್ಕೆ ಬುಡಾ ಅಧ್ಯಕ್ಷರ ಸೂಚನೆ
ಬಳ್ಳಾರಿ, ಜು. 23: ನಗರದ ಅಲ್ಲಿಪುರ ಬಳಿರುವ 30ನೇ ವಾಡರ್ಿನ ರಾಮೇಶ್ವರ ನಗರದ ಉದ್ಯಾನವನಕ್ಕೆ ಮೀಸಲಿಟ್ಟ ಜಾಗದ ಪ್ಲಾಟ್ ನಂ-273ರಲ್ಲಿ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಸದರಿ ಸ್ಥಳದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಸೂಚಿಸಿದ್ದಾರೆ.
ಅಕ್ರಮ ಒತ್ತುವರಿಗೆ ಸಂಬಂಧಿಸಿದಂತೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧ್ಯಕ್ಷ ದಮ್ಮೂರು ಶೇಖರ್ ಅವರು ಮಹೇಶ್ ಅಗರ್ ವಾಲ್ ಹಾಗೂ ವೆಂಕಟೇಶ್ ದೇವಸ್ಥಾನದ ಆಡಳಿತ ಮಂಡಳಿ ಅವರಿಂದ 25*15 ಚದರಡಿ ಸ್ಥಳದಲ್ಲಿ ಬುನಾದಿ ಹಾಕಿ ವೇದಿಕೆ ಹಾಗೂ ಶೆಡ್ ನಿಮರ್ಾಣ ಮಾಡಲಾಗಿರುವುದನ್ನು ತೆರವುಗೊಳಿಸಿ ಈ ಜಾಗದಲ್ಲಿ ಉದ್ಯಾನವನ ನಿಮರ್ಿಸಲು ಅಗತ್ಯಕ್ರಮ ಜರುಗಿಸುವಂತೆ ಬುಡಾ ಎಂಜನಿಯರ್ ರವಿಶಂಕರ್ ಮತ್ತು ಮಹಾನಗರ ಪಾಲಿಕೆ ಎಂಜನಿಯರ್ ವಿರೇಶ್ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಬುಡಾ ಸಿಬ್ಬಂದಿ ಇದ್ದರು.