ತಾಳಿಕೋಟಿ

ಬ್ರಿಲಿಯಂಟ್ ಶಾಲೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

ಬ್ರಿಲಿಯಂಟ್ ಶಾಲೆಯ ವಿದ್ಯಾರ್ಥಿಗಳ  ಅಮೋಘ ಸಾಧನೆ

ತಾಳಿಕೋಟಿ 09: ಇತ್ತೀಚಿಗೆ ಮುದ್ದೇಬಿಹಾಳ ಪಟ್ಟಣದಲ್ಲಿ ಜರುಗಿದ 2ನೇ ರಾಜ್ಯ ಮಟ್ಟದ ಟ್ರೆಡಿಷನಲ್ ಶೂಟೋಕಾನ ಕರಾಟೆ ಚಾಂಪಿಯನ್ಶಿಪ್ನಲ್ಲಿ ಇಲ್ಲಿಯ ಬ್ರಿಲಿಯಂಟ್ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳು ಅಮೋಘ ಸಾಧನೆ ತೋರಿದ್ದಾರೆ.

ಈ ಬಾರಿ ಈ ಚಾಂಪಿಯನ್ಶಿಪ್ನಲ್ಲಿ ಶಾಲೆಯಿಂದ ಒಟ್ಟು 23 ವಿದ್ಯಾರ್ಥಿಗಳು ಬಾಗವಹಿಸಿ 6 ಚಿನ್ನದ 6ಬೆಳ್ಳಿಯ ಹಾಗೂ 11 ಕಂಚಿನ ಪದಕಗಳನ್ನು ಗಳಿಸಿಕೊಂಡಿದ್ದಾರೆ. ಕುಮಿತೆ ವಿಭಾಗದಲ್ಲಿ ಒಟ್ಟು 13 ಪದಕುಗಳು ಬಂದಿವೆ, ಇದರಲ್ಲಿ ಮಹದೇವ ಮುರನಾಳ ಬಿ-50 ಆಕಾಶ ಅಂಗಡಿ, ಬಿ-40 ಪ್ರಥಮ ಬಹುಮಾನ, ಮಯೂರ ಆಲೂರ ಬಿ-40, ವಿವೇಕಾನಂದ ಹಿರೇಮಠ ಬಿ-70, ಪೃಥ್ವಿ ಸಾಹುಕಾರ ಬಿ-50 ದ್ವಿತೀಯ ಬಹುಮಾನ, ಹಾಗೂ ಚರಣರಾಜ ಪೂಜಾರಿ, ಪವನ ಚೌಹಾಣ, ಅನೀಲ ಕೊಡಮನಹಳ್ಳಿ, ಶಾಂತಗೌಡ ಕೆ, ಸುಮಂತ ನಡುವಿನಮನಿ, ಪ್ರಜ್ವಲ ಚಿತಾಪೂರ, ಬಸನಗೌಡ ಡಿ, ಪ್ರತೀಕ ಚಿಕ್ಕೊಂಡ ತೃತಿಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಅಭಿನಂದನೆ: ಈ ಅಮೋಗ ಸಾಧನೆಯ ಮೂಲಕ ಶಾಲೆಯ ಕೀತರ್ಿಯನ್ನು ಹೆಚ್ಚಿಸಿದ ವಿಜೇತ ವಿದ್ಯಾಥರ್ಿಗಳಿಗೆ ಹಾಗೂ ಅತ್ಯುತ್ತಮವಾಗಿ ತರಬೇತಿಗೊಳಿಸಿದ ತರಬೇತಿದಾರ ಲಕ್ಷ್ಮಣ ಫೀರಂಗಿ, ತಂಡದ ವ್ಯವಸ್ಥಾಪಕ ಅರ್ಜುನ್   ಹಡಗಲಿ, ಇವರನ್ನು ಸಂಸ್ಥೆಯ ಅಧ್ಯಕ್ಷ ಎನ್. ಬಿ. ನಡುವಿನಮನಿ, ಹಾಗೂ ಕಾರ್ಯದಶರ್ಿ ಎಮ್. ಬಿ. ಮಡಿವಾಳರ ಅಭಿನಂದಿಸಿದ್ದಾರೆ 

ಸುದ್ದಿ ಓದಿ