ಬಳ್ಳಾರಿ

ಬಾಲಕ ಕಾಣೆ: ಪ್ರಕರಣ ದಾಖಲು

ಬಾಲಕ ಕಾಣೆ: ಪ್ರಕರಣ ದಾಖಲು

ಬಳ್ಳಾರಿ 15: ನಗರದ ದೇವಿನಗರದ 5ನೇ ಕ್ರಾಸ್‍ನ ನಿವಾಸಿ 10 ವರ್ಷದ ಶೋಹಿಬ್ ಎನ್ನುವ ಬಾಲಕ ಸೆ.13ರಂದು ಕಾಣೆಯಾಗಿರುವ ಕುರಿತು ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಕಾನೂನು ಮತ್ತು ಸುವ್ಯವಸ್ಥೆಯ ಪೊಲೀಸ್ ಸಬ್-ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಣೆಯಾದ ಬಾಲಕನ ಚಹರೆ ಗುರುತು: ಕೋಲು ಮುಖ, ಗೋಧಿ ಮೈಬಣ್ಣ, 4.5 ಅಡಿ ಎತ್ತರ, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾನೆ. ತಿಳಿ ಹಸಿರು ಬಣ್ಣದ ಟೀ ಶರ್ಟ್, ಗೋಲ್ಡ್ ಬಣ್ಣದ ಜೀನ್ಸ್‍ಪ್ಯಾಂಟ್ ಧರಿಸಿರುತ್ತಾನೆ.

ಕಾಣೆಯಾದ ಬಾಲಕನ ಕುರಿತು ಯಾರಿಗಾದರೂ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಅವರು ಕೋರಿದ್ದಾರೆ.

ಸುದ್ದಿ ಓದಿ