ಬಳ್ಳಾರಿ

ಗಡಿ ಸಾಂಸ್ಕೃತಿಕ ಕಲಾ ಉತ್ಸವ

ಗಡಿ ಸಾಂಸ್ಕೃತಿಕ ಕಲಾ ಉತ್ಸವ

ಲೋಕದರ್ಶನ ವರದಿ 

 ಬಳ್ಳಾರಿ : ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್‌ (ರಿ) ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು, ಇವರ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪು-2022-23 ಗಡಿ ಸಾಂಸ್ಕೃತಿಕ ಕಲಾ ಉತ್ಸವ   ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಪ್ರೌಢಶಾಲಾ ಆವರಣ ಶಿಡಿಗಿನಮೊಳ ಗ್ರಾಮದಲ್ಲಿ ನಡೆಯಿತು.  

 ಕಾರ್ಯಕ್ರಮದ ಉದ್ಘಾಟನೆಯನ್ನು ಪಿ.ರುದ್ರಯ್ಯ  ಅಧ್ಯಕ್ಷರು ಗ್ರಾಮ ಪಂಚಾಯಿತಿ ಶಿಡಿಗಿನಮೊಳ ಇವರುಗಳು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು, ವೇದಿಕೆಯ ಕಾರ್ಯಕ್ರಮದಲ್ಲಿ ಮಾಹಾನಂದಿ ತಿಪ್ಪಯ್ಯ, ರತ್ನಮ್ಮ ಲಕ್ಷ್ಮಣ, ಟಿ.ಸೀನಪ್ಪ, ಚನ್ನಬಸವನಗೌಡ, ಜಿ.ಎಂ.ಮಹೇಶ್ವರ ಸ್ವಾಮಿ ಗ್ರಾ.ಪಂ. ಸದಸ್ಯರುಗಳು, ಎಂ.ಪಿ.ಗಾದಿಲಿಂಗಪ್ಪನ ಗೌಡ, ಸದಸ್ಯರು ಕೆ.ವೀರಾಪುರ ಮತ್ತು ಟ್ರಸ್ಟ್‌ ಅಧ್ಯಕ್ಷ ಜಾತಮ್ಮ, ರಾಜ್ಯ ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು. 

ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರ್ಥನೆ ಗೀತೆಯನ್ನು ಹೆಚ್‌.ಶಿವರಾಜ, ಹೆಚ್‌.ಮನೋಜ್ ಮತ್ತು ಗುರು ಇವರು ನಿರ್ವಹಿಸಿದರು. ಜಿ.ಎಂ.ಮಹೇಶ್ವರ ಸ್ವಾಮಿ, ನಿವೃತ್ತ ಗುರುಗಳು ಶಿಡಿಗಿನಮೊಳ ಇವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು, ರಂಗಗೀತೆ, ಶಾಸ್ತ್ರಿಯ ಸಂಗೀತ  ಸಿ.ಎಂ. ಸಾರಂಗಮಠ ಮತ್ತು  ಎನ್‌.ಲೋಕೇಶ್ ಶಿಡಿಗಿನಮೊಳ ಇವರಿಂದ ನೇರವೇರಿತು. ಕೊಳಲು ವಾದನ  ಗೋವರ್ಧನರೆಡ್ಡಿ, ಶಿಕ್ಷಕರು ಇವರು ನೇರವೇರಿಸಿದರು ಮತ್ತು ಕೆ.ಸಿ.ಸುಂಕಣ್ಣ (ಅಭಿಷೇಕ್ ಮತ್ತು ಕಲಾ ತಂಡದವರಿಂದ) ಸಮೂಹ ನೃತ್ಯ ಪ್ರದರ್ಶನ ನಡೆಯಿತು. 

ಕನ್ನಡಪರ ಚಿಂತಕರಿಂದ ಕನ್ನಡ-ನಾಡು-ನುಡಿಯ ಬಗ್ಗೆ ಎಂ.ಗಿರಿಜಾಪತಿ, ಸಹ ಶಿಕ್ಷಕರು, ಜಿಲ್ಲಾ ಪರಿಷತ್ ಪ್ರೌಢಶಾಲೆ, ಡಿ.ಹಿರೇಹಾಳ್ ಇವರು ವಿಚಾರಣ ಸಂಕೀರಣ ನಡೆಯಿತು, ಕನ್ನಡ  ಸುಜಾತಮ್ಮ ನವರು ಬಯಲಾಟ ರಂಗಗೀತೆಗಳನ್ನು ಹಾಡಿದರು,  

ಕೊನೆಯಲ್ಲಿ ವೀರ ಅಭಿಮನ್ಯು ಕಾಳಗ ಬಯಲಾಟ ಪ್ರದರ್ಶನ ನಡೆಯಿತು, ಬಾಲಕೃಷ್ಣನ ಪಾತ್ರದಲ್ಲಿ ಕುಮಾರಿ ದೀಪ್ತಿ ಮೀನಹಳ್ಳಿ, ಅಭಿಮನ್ಯು ಪಾತ್ರದಲ್ಲಿ .ಜಿ.ತಿಪ್ಪೇಸ್ವಾಮಿ ಯಾಳ್ಪಿ, ಧರ್ಮರಾಯ ಪಾತ್ರದಲ್ಲಿ ಹನುಮಂತ ಶಿಡಿಗಿನಮೊಳೆ, ಸುಭದ್ರ ಪಾತ್ರದಲ್ಲಿ  ರತ್ನಮ್ಮ ವಿರುಪಾಪುರ, ಸಾರಥಿ : ತಿ​‍​‍್ೇರುದ್ರ​‍್ಪ, ಯಾಳ್ಪಿ, ಹಾರ್ಮೋನಿಯಂ  ಚಿಕ್ಕಣ್ಣ ತೊಲಮಾಮಿಡಿ, ವೈ.ರಂಗಾರೆಡ್ಡಿ ಕೆ.ವೀರಾಪುರ,  ಪಾಮಣ್ಣ ಮೀನಹಳ್ಳಿ, ಎಸ್‌.ವಿರೇಶ್, ತಬಲ, ಬಳ್ಳಾರಿ ಮದ್ದಲಿ ಹೆಚ್‌.ಸಿದ್ದಪ್ಪ ಶಿಡಿಗಿನಮೊಳ ಇವರುಗಳು ನೇರವೇರಿಸಿಕೊಟ್ಟರು. 

ಸಹಕಾರ ಗ್ರಾಮದ ಸಮಸ್ತ ಕಲಾಸಕ್ತರು ಹಾಗೂ ನಾಗರೀಕರು, ಸಮಸ್ತ ಸಿಬ್ಬಂದಿ ಹಾಗೇಯೇ, ಕಾರ್ಯಕ್ರಮದ ನಿರೂಪಣೆಯನ್ನು ಎನ್‌.ಸಿದ್ದಲಿಂಗೇಶ್ವರ, ಸಹ ಶಿಕ್ಷಕರು ಶಿಡಿಗಿನಮೊಳ ಇವರು ನೇರವೇರಿಸಿದರು, ವಂದರ್ನಾಪಣೆ ಬಿ.ಸುರೇಶ್‌ಕುಮಾರ್ ನೇರವೇರಿಸಿದರು. 


ಸುದ್ದಿ ಓದಿ