ಗುರುಭವನದಲ್ಲೇ ಪುಸ್ತಕ ಲೋಕಾರ್ಪಣೆ
ಆರೋಗ್ಯ,ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗಿ | ಗಾಳಿಗೆ ತೂರಿದ ಜಿಲ್ಲಾಧಿಕಾರಿಗಳ ಆದೇಶ
ಹಗರಿಬೊಮ್ಮನಹಳ್ಳಿ 27: ಮಾಹಾ ಮಾರಿ ಕೊರೋನಾ ವೈರಸ್ ಇಡೀ ವಿಶ್ವಕ್ಕೆ ತಲೆ ನೋವಾಗಿದ್ದು, ಹಲವು ಪ್ರದೇಶಗಳಲ್ಲಿ ಈ ವೈರಸ್ ಆರ್ಭಟಕ್ಕೆ ತತ್ತರಿಸಿ ಲಾಕ್ಡೌನ್ ಆದೇಶ ಪಾಲನೆಯಾಗುತ್ತಿದ್ದರೆ, ಇನ್ನು ಕೋವಿಡ್ ಎರಡನೆ ಅಲೆಯ ಮಾರ್ಗಸೂಚಿಗಳ ಕ್ರಮಕ್ಕೆ ಸೂಚಿಸಿ ಅಧಿಕಾರಿಗಳು ಕಟ್ಟು ನಿಟ್ಟಿನ ಆದೇಶಗಳು ಪಾಲಿಸುವಂತೆ ಸೂಚಿಸಿದ್ದರೂ, ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯು ಆರೋಗ್ಯೋತ್ಸವ ಕಾರ್ಯಕ್ರಮದಡಿ ಗುಂಪು ಆಟಗಳ ಆಯೋಜಿಸಿದ್ದು ಕಂಡುಬಂದರೆ, ಪಟ್ಟಣದ ಗುರುಭವನದಲ್ಲಿ ಶಿಕ್ಷಕರ ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮ ಜರುಗಿರುವುದು ಜಿಲ್ಲಾಧಿಕಾರಿಗಳ ಆದೇಶಕ್ಕೂ ನಮಗೂ ಯಾವುದೇ ಸಂಭಂಧವಿಲ್ಲವೆಂಬಂತೆ ಕಾಣುತ್ತಿದೆ.
ಕರೊನಾ ತೀವ್ರತೆಯ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಆರೋಗ್ಯ ಇಲಾಖೆಯೇ ಮೂರ್ನಾಲ್ಕು ದಿನಗಳ ಕಾಲ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಾರ್ವಜನಿಕರೇ ಪ್ರಶ್ನಿಸುವಂತೆ ಮಾಡಿದೆ. ತಾಲೂಕು ವೈಧ್ಯಾಧಿಕಾರಿಗಳ ಮುಂದಾಳತ್ವದಲ್ಲಿ ತಾಲೂಕಿನ ಆರೋಗ್ಯ ಕೇಂದ್ರ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಸಮಸ್ತ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಾವುದೇ ನಿಯಮಗಳನ್ನು ಪಾಲಿಸದೇ ಗುಂಪು ಗುಂಪಾಗಿ ಕ್ರೀಡೆಗಳಲ್ಲಿ ತೊಡಗಿರುವುದು ಎಷ್ಠರ ಮಟ್ಟಿಗೆ ಸರಿ.
ಆಟಾಟೋಪಗಳು ಬೇಕಿತ್ತೇ?: ಎಲ್ಲೆಡೆ ಕೊರೋನಾ ಎಡರನೆ ಅಲೆ ಹರಡುತ್ತಿದ್ದು ಇಂತಹ ಸಂಧರ್ಭದಲ್ಲಿ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳು ಸಿಬ್ಬಂದಿಗಳು ಹೊರ ಹಾಗೂ ಒಳಾಂಗಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಸ್ಫರ್ಧೆಗಳು ಏರ್ಪಡಿಸಿರುವುದು ಇಂತಹ ಸಮಯದಲ್ಲಿ ಬೇಕಿತ್ತೇ ಎಂಬ ಯಕ್ಷ ಪ್ರಶ್ನೆ ಬುದ್ದಿ ಜೀವಿಗಳದ್ದಾಗಿದೆ.
ಪುಸ್ತಕ ಲೋಕಾರ್ಪಣೆಯಲ್ಲಿ ಸರ್ಕಾರಿ ಅಧಿಕಾರಿಗಳು ಭಾಗಿ :ಗುರುಭವನದಲ್ಲಿ ಶನಿವಾರ ನಡೆದ ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಡಿಡಿಪಿಐ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರು ಭಾಗಿಯಾಗಿರುವುದು ಕಾಣಬಹುದಾಗಿದೆ.
ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ : ಜಿಲ್ಲಾಧ್ಯಾಂತ ಕರೊನ ವೈರಸ್ನ ಎರಡನೆ ಅಲೆಯ ಅಬ್ಬರ ಜೋರಾಗಬಹುದು ಎಂಬ ಮುಂದಾಲೋಚನೆಯಿಂದ ರಾಜ್ಯ ಸರಕಾರವು ಯಾವುದೇ ರೀತಿಯ ಕಾರ್ಯಕ್ರಮ ಸೇರಿದಂತೆ ಹಬ್ಬ, ಹರಿದಿನ ಸೇರಿದಂತೆ ಜನ ಜಮಾಯಿಸುವ ಜಯಂತಿಗಳು ಹಾಗೂ ಇತರೆ ಚಟುವಟಿಕೆಗಳಿಗೆ ಅನುಮತಿ ನೀಡುವಂತಿಲ್ಲ ಎಂಬ ಆದೇಶವಿದ್ದರೂ ಗುರುಭವನದಲ್ಲಿ ಪುಸ್ತಕ ಲೋಕಾರ್ಪಣೆ ಹಾಗೂ ಆರೋಗ್ಯ ಇಲಾಖೆಯ ಆರೋಗ್ಯೋತ್ಸವ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿಗಳ ಆದೇಶ ಬೇಕಿಲ್ಲವೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲಾಧಿಕಾರಿಗಳು 26ರ ಶುಕ್ರವಾರ ಹೊರಡಿಸಿರುವ ಆದೇಶದನ್ವಯ ಯಾವುದೇ ಸಭೆ ಸಮಾರಂಭಗಳು ಹಾಗೂ ಗುಂಪು,ಇತರೆ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ತಾಲೂಕಾಡಳಿತಗಳಿಗೆ ಸೂಚಿಸಿದ್ದರೂ ಪಟ್ಟಣದ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳು ಆದೇಶ ಮರೆತು ತಮ್ಮಿಷ್ಟದಂತೆ ಕಾರ್ಯಕ್ರಮಗಳನ್ನು ಆಯೋಜಿಸುವುದಾದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಇವರ ಹಾದಿ ಹಿಡಿಯುವರೇ ಅಥವಾ ಆದೇಶಗಳನ್ನು ಪಾಲಿಸುವರೆ ಎಂದು ಕಾದು ನೋಡುಬೆಕಿದೆ.
ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ ಆರೋಗ್ಯ ಇಲಾಖೆ ಹಾಗೂ ಗುರುಭವನದಲ್ಲಿ ನಡೆದ ಪುಸ್ತಕ ಲೂಕಾರ್ಪಣೆ ಕಾರ್ಯಕ್ರಮ ಕುರಿತ ನಿಖರ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು.
ಶರಣಮ್ಮ. ತಾಲೂಕು ದಂಡಾಧಿಕಾರಿಗಳು.
ತಾಲೂಕು ವೈದ್ಯಾಧಿಕಾರಿಯವರಿಗೆ ಮಾಹಿತಿಗಾಗಿ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ.
ಡಾ.ಶಿವರಾಜ್