ಸದಸ್ಯ ಹನುಮಂತಪ್ಪ ಜನ್ಮದಿನ: ಮಕ್ಕಳಿಗೆ ಪುಸ್ತಕ ವಿತರಣೆ
ಬಳ್ಳಾರಿ:ನ (17)ರಂದು ನಗರದ 22ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಹನುಮಂತು ಅವರ 51ನೇ ಜನ್ಮದಿನವನ್ನು ಕಪಗಲ್ಲು ರಸ್ತೆಯ ರಕ್ತದಾನ ಹಾಗೂ ಉಚಿತ ಪುಸ್ತಕಗಳ ಕಾರ್ಯಕ್ರಮದೊಂದಿಗೆ ಪಾಲಿಕೆ ಸದಸ್ಯ ಹನುಮಂತಪ್ಪ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿ ಬಳ್ಳಾರಿ ನಗರ ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿ ಅವರು ಆಗಮಿಸಿ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಡವರಿಗೆ ದೀನ ದಲಿತರಿಗೆ ಬಡತನದಲ್ಲಿ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುವರು. ನಂತರ ನಗರದ ಬೀದಿಯಲ್ಲಿ ಇರುವಂತಹ ಭಿಕ್ಷೆ ಬೇಡುತ್ತಿರುವ ಜನರನ್ನು ತಮ್ಮ ಮಾನವೀಯ ದೃಷ್ಟಿಯಿಂದ ಜನರಿಗೆ ಊಟದ ವ್ಯವಸ್ಥೆ ಹಾಗೂ ಇಂದು ರಕ್ತಬಂಡಾರವನ್ನು ( ಬ್ಲಡ್ ಡೊನೇಟ್ ) ಹಮ್ಮಿ ಕೊಳಲಾಯಿತು.ಈ ವಾರ್ಡಿನಲ್ಲಿ ಯಾವುದೇ ಸಮಸ್ಯೆ ಇದ್ದರೂ ಸಹ ಜನರು ಇವರ ಬಳಿಗೆ ಬಂದಾಗ ಆ ಸಮಸ್ಯೆಯನ್ನು ಬಗೆಹರಿಸಿ ಅವರಿಗೆ ಪರಿಹಾರವನ್ನು ನೀಡುವರು. ಅಲ್ಲದೆ ಹನುಮಂತಪ್ಪ ಅವರನ್ನು ನನ್ನ ಶಿಷ್ಯರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಹನುಮಂತಪ್ಪ ಅವರನ್ನು ಕುರಿತು ಮಾತನಾಡಿದರು.
ಹಾಗೂ 51ನೇ ಜನ್ಮದಿನವನ್ನು ಶುಭ ಹಾರೈಸಿ ಹನುಮಂತು ಅವರು ನನ್ನ ಆತ್ಮೀಯರು ನಮ್ಮ ಹುಡುಗ ಎಂದು ಅಪ್ಪಿಕೊಂಡಿದ್ದಲ್ಲದೆ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ವನ್ನೂರ್ಪ,ಗುಡಿಗಂಟಿ ಹನುಮಂತ, ಮಲ್ಲನಗೌಡ, ಸಮಾಜ ಸೇವಕರಾದ ಗುಜರಿ ಅಜಿಜ್, ರಾಘವೇಂದ್ರ ರಘು, ಮಹೇಶ್, ಪಾಲಕರೆಡ್ಡಿ, ಶ್ರೀರಾಮುಲು, ದುರ್ಗಣ್ಣ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿ ಮಹಾನಗರ ಪಾಲಿಕೆ ಸದಸ್ಯರಾದ ಹನುಮಂತು ಅವರ ಜನ್ಮದಿನದ ಸಂಭ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು. ಒಂದನೇ ಸುದ್ದಿ ಹಾಗೂ ಫೋಟೋ