ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಬಾಯಲರ್ ಪ್ರದೀಪನಕ್ಕೆ ಚಾಲನೆ
ಸಂಕೇಶ್ವರ 21: ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ 2024-25 ನೇಯ ಸಾಲಿನ ಕಬ್ಬು ಅರೆಯುವ ಹಂಗಾಮಿನ ಬಾಯಲರ ಪ್ರದೀಪನ ಸಮಾರಂಭವು ಇಂದು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಸಿದ್ದ ಸಂಸ್ಥಾನ ಮಠ ನಿಡಸೋಶಿಯ ಹಿರಿಯ ಸ್ವಾಮಿಜಿ ಶಿವಲಿಂಗೇಶ್ವರ ಮಹಾಸ್ವಾಮಿಜಿಗಳ ಹಾಗೂ ಹುನ್ನೂರ ವಿಠ್ಠರಾಯದೇವರ ಪೂಜಾರಿ ಬಾಗಪ್ಪಾ ಬಿ. ಬಿಜ್ಜುಪೂಜೇರಿ ದಂಪತಿಗಳು ಉಪಸ್ಥಿತರಿದ್ದರು.
ಕಾರ್ಖಾನೆ ಚೇರಮನ್ ಹಾಗೂ ಹುಕ್ಕೇರಿ ಮತಕ್ಷೇತ್ರದ ಶಾಸಕ ನಿಖಿಲ ಉಮೇಶ ಕತ್ತಿ ಹಾಗೂ ನಿರ್ದೇಶಕ ಶಿವನಾಯಕ ನಾಯಿಕ, ಶಿವಪುತ್ರ (ಅಪ್ಪಾಸಾಹೇಬ) ಶಿರಕೋಳಿ, ಪ್ರಭುದೇವ ಪಾಟೀಲ, ಬಸವರಾಜ ಕಲ್ಲಟ್ಟಿ, ಸುರೇಶ ಬೆಲ್ಲದ, ಬಾಬಾಸಾಹೇಬ ಅರಬೋಳೆ, ಅಶೋಕ ಪಟ್ಟಣಶೆಟ್ಟಿ, ಬಸ್ಸಪ್ಪಾ ಮರಡಿ, ಅಮರ ನಲವಡೆ, ಬಂಡು ಹತನೂರೆ, ಸುನೀಲ ಪರ್ವತರಾವ, ಗುರು ಕುಲಕರ್ಣಿ, ಲಿಂಗರಾಜ ಬಾ. ನಾಯಿಕ, ಶಶಿಕಾಂತ ದೊಡ್ಡಲಿಂಗನವರ, ಸುಭಾಷ ಪಾಟೀಲ, ಶೀತಲ ಬ್ಯಾಳಿ, ಮಾರುತಿ ರಾಚನ್ನವರ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸಾತಪ್ಪಾ ಕರ್ಕಿನಾಯಿಕ, ಮಾಜಿ ಸಮನ್ವಯ ಅಧಿಕಾರಿ ಜಯಸಿಂಗ ಸನದಿ, ಕಾರ್ಯಾಲಯ ಅಧೀಕ್ಷಕ ಸುಭಾಷ ನಾಸಿಪುಡಿ, ಕಬ್ಬು ಬೆಳೆಗಾರರು ಅಧಿಕಾರಿ ಹಾಗೂ ಕಾರ್ಮಿಕ ವರ್ಗದವರು ಉಪಸ್ಥಿತರಿದ್ದರು.
ಕಾರ್ಖಾನೆಯ ಅಧ್ಯಕ್ಷ ನೀಖೀಲ ಉ. ಕತ್ತಿಯವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಹುಕ್ಕೇರಿ ತಾಲೂಕಿನಲ್ಲಿ ಸುಮಾರು 28 ಲಕ್ಷ ಟನ್ ರೈತರು ಕಬ್ಬನ್ನು ಬೆಳೆದಿದ್ದಾರೆ. ಈ ಪ್ರಸಕ್ತ ಸಾಲಿನಲ್ಲಿ ಸರಿಯಾಗಿ ಮಳೆಯಾದರಿಂದ ಇಳುವರಿಯು ಸಹ ಚೆನ್ನಾಗಿ ಆಗುತ್ತದೆ ಈ 2024-25 ಸಾಲಿನಲ್ಲಿ ತಾವು ಸುಮಾರು 12 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಿರುತ್ತೇವೆ, ಹಿಡಕಲ್ ಡ್ಯಾಂದ ಸಂಗಮ ಸಕ್ಕರೆ ಕಾರ್ಖಾನೆಯು ಸಹ 4 ಲಕ್ಷ ಕಬ್ಬು ನುರಿಸುವ ಗುರಿ ಹೊಂದಿರುತ್ತದೆ, ಮತ್ತು ಬೆಲ್ಲದ ಬಾಗೇವಾಡಿಯ ಖಾಸಗಿ ಒಡೆತನಕ್ಕೆ ಸೇರಿದ ದಿವಂಗತ ವಿಶ್ವನಾಥ ಸುಗರ ಫ್ಯಾಕ್ಟರಿಯು ಸಹ 16 ಲಕ್ಷ ಮೆ.ಟನ್. ಕಬ್ಬು ನುರಿಸುವ ಗುರಿ ಹೊಂದಿದ್ದೇವೆ, ಈ ಪ್ರಸಕ್ತ ಸಾಲಿನಲ್ಲಿ ಕಬ್ಬು ಬೆಳೆಯುವ ರೈತರಿಗೆ ಕಬ್ಬಿನ ಬೆಲೆಯು ಸಹ ಹೆಚ್ಚಳವಾಗಲಿದೆ ಎಂದು ತಿಳಿಸಿದರು.