ಸಂಕೇಶ್ವರ ಬಳಿ ಯುವಕನ ಶವ ಪತ್ತೆ : ಕೊಲೆಯ ಸಂಶಯ

ಸಂಕೇಶ್ವರ 20 : ಪಟ್ಟಣದ ಹೊರ ವಲಯದ ಬೈಪಾಸ್ ರಸ್ತೆ ಹತ್ತಿರ ಯುವಕನ ಶವವೊಂದು ಪತ್ತೆಯಾಗಿದ್ದು, ಯುವಕನ ಮುಖದ ತುಂಬೆಲ್ಲಾ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಬಿಸಾಕಿರುವ ಸಂಶಯ ವ್ಯಕ್ತವಾಗಿದೆ.

ಸಂಕೇಶ್ವರ ಪಟ್ಟಣದ ಬೈಪಾಸ್ ರಸ್ತೆಯ ಗಡಹಿಂಗ್ಲಜ್ ರಸ್ತೆಯ ಬಳಿ ಸುಮಾರು 25ರಿಂದ 30 ವರ್ಷ ವಯಸ್ಸಿನ ಯುವಕನ ಶವ ಬುಧವಾರ ಬೆಳಿಗ್ಗೆ ಕಂಡು ಬಂದಿದೆ. ಈ ಯುವಕನ ಟಿ ಶರ್ಟ್ ಮೇಲೆ ಶಿವರಾಜ್ ಕಾಲೇಜ ಎಂದು ಬರೆಯಲಾಗಿದ್ದು, ಈತ ಮಹಾರಾಷ್ಟ್ರ ಮೂಲದವನಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. 

ಘಟನಾ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.