ಶಿಗ್ಗಾವ್

ರಕ್ತದಾನ ಮಾಡುವುದೇ ಮಾನವೀಯತೆ: ಹನುಮಂತಪ್ಪ ಕರೆ

ರಕ್ತದಾನ ಮಾಡುವುದೇ ಮಾನವೀಯತೆ: ಹನುಮಂತಪ್ಪ ಕರೆ

ಶಿಗ್ಗಾವಿ 21: ರಕ್ತದಾನ ಮಾಡುವುದೇ ಮಾನವೀಯತೆ ಈ ಗುಣಗಳನ್ನು ನಾವು ನೀವು ಬೆಳಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ ಪಿ ಹೆಚ್ ಹನುಮಂತಪ್ಪ ಕರೆ ಕೊಟ್ಟರು. 

ಪಟ್ಟಣದ ಎಸ್‌.ಆರ್‌.ಜೆ.ವ್ಹಿ.ಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ರಕ್ತನಿಧಿ ಕೇಂದ್ರ ಹಾವೇರಿ, ಸಾರ್ವಜನಿಕ ಆಸ್ಪತ್ರೆ ಶಿಗ್ಗಾವಿ, ರೆಡ್ ಕ್ರಾಸ್ ಎನ್‌.ಎಸ್‌.ಎಸ್ ಮತ್ತು ಜೆಸಿಐ ಶಿಗ್ಗಾವ್ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ಅತಿ ಹೆಚ್ಚು ರಕ್ತವನ್ನು ಪಡೆಯುತ್ತಿರುವ ತಾಲೂಕ ಶಿಗ್ಗಾವಿ ಆದರೆ ಇಲ್ಲಿ ಸ್ವಯಂ ಪ್ರೇರಿತವಾಗಿ ಸಂಘ ಸಂಸ್ಥೆಯ ಪದಾಧಿಕಾರಿಗಳು ಮುಂದೆ ಬರಬೇಕು ಏಕೆಂದರೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವುದರಿಂದ ಅಪಘಾತಗಳು ಹೆಚ್ಚು ಸಂಭವಿಸುತ್ತವೆ ಕಾರಣ ಹೆಚ್ಚಿನ ಸಂಖೈಯಲ್ಲಿ ರಕ್ತದಾನ ಮಾಡಿ ಎಂದರು.  

ಪ್ರೊ ಪಿ ಸಿ ಹಿರೇಮಠ್ ಅಧ್ಯಕ್ಷತೆ ವಹಿಸಿದ ಮಾತನಾಡಿ ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ  ಆದ್ದರಿಂದ ರಕ್ತವನ್ನು ತಯಾರು ಮಾಡಲು ಇನ್ನೂ ಯಾರಿಗೂ ಸಾದ್ಯವಾಗಿಲ್ಲ ಎಂದರು. 

ಮುಖ್ಯ ಅತಿಥಿ ಪ್ರೊ ಎಸ್ ಎಸ್ ಮಲ್ಲಾಡದ ಮಾತನಾಡಿದರು. ಡಾ. ಬಸವರಾಜ ತಳವಾರ, ಬಸವರಾಜ ಕಮತದ, ಸೌಭಾಗ್ಯ ದೊಡ್ಡಮನಿ, ಮಹಾಂತೇಶ ಹೊಳೆಮ್ಮನವರ, ಜೆಸಿಐ  ಅಧ್ಯಕ್ಷ ಡಿ ಆರ್ ತೋಟಿಗೇರ, ಜಿ ಎನ್ ಯಲಿಗಾರ , ಡಾ ಕುಮಾರ್ ಗೌಡ ಪಾಟೀಲ್, ಮಲ್ಲಿಕಾರ್ಜುನ ಕರಡಿ, ನಾಗರಾಜ್ ಬ್ರಹ್ಮಾವರ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಈ ನಿರೂಪಣೆ ಮತ್ತು ಸ್ವಾಗತ ಡಾ. ಡಿ. ಎ ಗೊಬ್ಬರಗುಂಪಿ, ವಂದನಾರೆ​‍್ಣ ಡಾ. ಆರ್ ಸಿ ದಾದುಗೌಡ ನಿರ್ವಹಿಸಿದರು. 


ಸುದ್ದಿ ಓದಿ