ಬೈಲಹೊಂಗಲ

ಕೆಎಲ್‌ಇ ಸಹಯೋಗದೊಂದಿಗೆ ರಕ್ತದಾನ ಶಿಬಿರ

ಕೆಎಲ್‌ಇ ಸಹಯೋಗದೊಂದಿಗೆ ರಕ್ತದಾನ ಶಿಬಿರ
ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರ 61 ನೇ ಹುಟ್ಟುಹಬ್ಬದ ನಿಮಿತ್ಯವಾಗಿ ಮೆಟಗ

ಬೈಲಹೊಂಗಲ21: ರಕ್ತದಾನಿಗಳು ತಾವು ಮಾಡುವ ರಕ್ತದಾನ ಒಂದು ವ್ಯಕ್ತಿಯ ಜೀವದಾನವಾಗಿದೆ ರಕ್ತದಾನ ಮಾಡಿ ಇನ್ನೊಂದು ಜೀವಕ್ಕೆ ಆಧಾರವಾಗಿ ಆರೋಗ್ಯವಂತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು. 

ಅವರು ಬುಧುವಾರ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರ 61 ನೇ ಹುಟ್ಟುಹಬ್ಬದ ನಿಮಿತ್ಯವಾಗಿ ಮೆಟಗುಡ್ಡ ಅಭಿಮಾನಿ ಬಳಗ, ಕೆ.ಎಲ್‌.ಇ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ಇಂದಿನ ಯಾಂತ್ರಿಕ ಮತ್ತು ತಾಂತ್ರಿಕ ಯುಗದಲ್ಲಿ ಅನೇಕ ಸಾಧನೆಯ ಮೈಲುಗಲ್ಲು ಸಾಧಿಸಿದ ನಾವು ತಿನ್ನುವ ಅನ್ನ ಮತ್ತು ರಕ್ತವನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ ಆದ್ದರಿಂದ ರಕ್ತವನ್ನು ಒಬ್ಬರಿಂದ ದಾನ ಪಡೆದುಕೊಂಡು ರೋಗಿಗಳಿಗೆ ಒದಗಿಸಲಾಗುತ್ತದೆ ಎಂದರು. 

ರಕ್ತ ಪಡೆದುಕೊಳ್ಳುವ ರೋಗಿಗಳಷ್ಟೆ  ರಕ್ತ ನೀಡುವ ದಾನಿಗಳಿಗು ಅವರ ಆರೋಗ್ಯ ಪರಿಕ್ಷೇಗಳ ಮೂಲಕ ಲಾಭವಾಗಲಿದೆ. ಕೋವಿಡ್ ಸೋಂಕಿನ ಸಂದರ್ಭದಲ್ಲೂ ರಕ್ತದಾನಿಗಳು ಮುಂದೆಬಂದು ರಕ್ತದಾನ ಮಾಡುತ್ತಿರುವ ಯುವಕರ ಕಾರ್ಯ ಅನನ್ಯವಾಗಿದೆ. ರಸ್ತೆ ಅಫಘಾತದಲ್ಲಿ  ಜೀವನ್ಮರಣ ಹೋರಾಡುವ ವ್ಯಕ್ತಿಗೆ ರಕ್ತ ಅವಶ್ಯವಾಗಿದ್ದು ಪ್ರತಿಯೊಬ್ಬ ಮಾನವನು ರಕ್ತದಾನ ಮಾಡುವುದು ಅತ್ಯವಶ್ಯವಾಗಿದೆ. ಮನುಷ್ಯ  ರಕ್ತದಾನ ಮಾಡುವುದರಿಂದ  ಆರೋಗ್ಯ ಸುಧಾರಣೆ ಆಗುವುದರೊಂದಿಗೆ  ಚೈತನ್ಯ  ಮೂಡಲು ಸಹಕಾರಿಯಾಗಲಿದೆ ಎಂದರು.  

ಅಪಘಾತದಂತಹ ಸಂದರ್ಭದಲ್ಲಿ ರಕ್ತದಾನ ಮಾಡುವುದರ ಮೂಲಕ ವ್ಯಕ್ತಿಗೆ ಮರುಜೀವನ ನೀಡಲು ಸಹಾಯಕಾರಿಯಾಗಲಿದೆ. ಎಲ್ಲ ದಾನಗಳಿಗಿಂತ ಶ್ರೇಷ್ಠವಾದ ದಾನ ರಕ್ತದಾನವಾಗಿದ್ದು ಈ ಕುರಿತು ಯುವಕರಲ್ಲಿ ಇನ್ನೂ ಹೆಚ್ಚಿನ ಜಾಗೃತಿಗೊಳಿಸುವ ಕೆಲಸವಾಗಬೇಕಾಗಿದೆ ಎಂದರು.  

ಯುವಕರು ದುಶ್ಟಗಳಿಂದ ದೂರವಾಗಿ  ಗುಣಮಟ್ಟದ ಆಹಾರವನ್ನು ಸೇವಿಸುವ ಮೂಲಕ ಸದೃಡ ಆರೋಗ್ಯ  ಕಾಪಾಡಿಕೊಳ್ಳಬೇಕೆಂದರು. ಮನುಷ್ಯ ಆರೋಗ್ಯವಂತನಾಗಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಟ್ಟುಕೊಳ್ಳಬೇಕು. ಮನುಷ್ಯನಿಗೆ ರಕ್ತ ಅವಶ್ಯವಾಗಿದ್ದು ಇದು ಮಾರುಕಟ್ಟೆಯಲ್ಲಿ ಮುಕ್ತವಾಗಿ ಸಿಗಲು ಆಸಾಧ್ಯ ಕಾರಣ ಪ್ರತಿಯೊಬ್ಬರೂ  ರಕ್ತದಾನ ಮಾಡಬೇಕು ಎಂದರು. 

ಈ ಸಂದರ್ಭದಲ್ಲಿ ಕೆಎಲ್‌ಇ ನಿರ್ದೇಶಕ ಶ್ರೀಶೈಲ ಮೆಟಗುಡ್ಡ, ಬಿಜೆಪಿ ಮುಖಂಡ ಉದ್ಯಮಿ ವಿಜಯ ಮೆಟಗುಡ್ಡ, ಪುರಸಭೆ ಸದಸ್ಯ ಗುರು ಮೆಟಗುಡ್ಡ, ಯುವ ಮುಖಂಡರಾದ ಪ್ರಪುಲ್ ಪಾಟೀಲ, ಶಿವಾನಂದ ಬಡ್ಡಿಮನಿ, ಸುನೀಲ ಮರಕುಂಬಿ, ದಯಾನಂದ ಪರಾಳಶೆಟ್ಟರ, ಸುಭಾಷ್ ತುರಮರಿ, ಮಾರುತಿ ತುರಮರಿ, ಮಹಾಂತೇಶ ಜಿಗಜಿನ್ನಿ, ಜಗದೀಶ ಬೂದಿಹಾಳ, ಸಾಗರ ಭಾವಿಮನಿ ಹಾಗೂ ಬಿಜೆಪಿ ಕಾರ್ಯಕರ್ತರು ತಾಲೂಕಿನ ಮುಖಂಡರುಗಳು, ಅಭಿಮಾನಿ ಬಳಗ ಇದ್ದರು. 

ಮಾಜಿ ಶಾಸಕ ಜಗದೀಶ ಮೆಟಗುಡ ಹುಟ್ಟುಹಬ್ಬಕ್ಕೆ ಜಿಲ್ಲೆಯ ಶಾಸಕರು,ಮಾಜಿ ಶಾಸಕರು,ಬಿಜೆಪಿ ಕಾರ್ಯಕರ್ತರು,ಅಭಿಮಾನಿ ಬಳಗ ಶುಭ ಕೋರಿದರು. ಈ ಸಂದರ್ಭದಲ್ಲಿ ಸುಮಾರು 114 ಕ್ಕೂ ಜನರು ರಕ್ತದಾನ ಮಾಡಿದರು. 


ಸುದ್ದಿ ಓದಿ