ಮುಂದಗೋಡ

ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ

ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ

ಲೋಕದರ್ಶನ ವರದಿ 

ಮುಂಡಗೋಡ:ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಮತ್ತು ಸರ್ಕಾರಿ ತಾಂತ್ರಿಕ ತರಬೇತಿ ಮಹಾವಿದ್ಯಾಲಯ ನ್ಯಾಸರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಐಟಿಐ ಮಹಾವಿದ್ಯಾಲಯದಲ್ಲಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಆಚರಿಸಲಾಯಿತು.  

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಸಹದೇವಪ್ಪ ನಡಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಶಿಧರ ಹಿರೇಮಠ ಉಪನ್ಯಾಸ ನೀಡಿದರು. ಗೌರವ ಕಾರ್ಯದರ್ಶಿ ಎಸ್‌.ಡಿ.ಮುಡೆಣ್ಣವರ, ಡಾ.ಪಿ.ಪಿ.ಛಬ್ಬಿ, ವಿ.ಎಸ್‌.ಕೊಣಸಾಲಿ, ಪ್ರಾಂಶುಪಾಲ ರವಿ ಕಮಡೊಳ್ಳಿ, ರವಿ ಭಜಂತ್ರಿ, ಸಂಗಪ್ಪ ಕೋಳೂರ, ಎಸ್‌.ಬಿ.ಹೂಗಾರ, ಎಸ್‌.ಕೆ.ಬೋರ್ಕರ, ಆರ್‌.ಜೆ.ಬೆಳ್ಳೆನವರ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ