ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಜನ್ಮದಿನಾಚರಣೆ
ಲೋಕದರ್ಶನ ವರದಿ
ಬಳ್ಳಾರಿ 31: ಕಾಂಗ್ರೆಸ್ ಕಚೇರಿಯಲ್ಲಿ, ಗ್ರಾಮಾಂತರ ಹಾಗೂ ನಗರ ಕಾಂಗ್ರೆಸ್ ಸಮಿತಿಯ ವತಿಯಿಂದ ಜಿಲ್ಲಾ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರ ನೇತೃತ್ವದಲ್ಲಿ, ಭಾರತದ ಉಕ್ಕಿನ ಮನುಷ್ಯ ಹಾಗೂ ದೇಶದ ಮೊದಲ ಉಪ ಪ್ರಧಾನಿಗಳಾದ ಭಾರತ ರತ್ನ ಸರ್ದಾರ್ ವಲ್ಲಭಾಯ್ ಪಟೇಲ್ ಅವರ 147ನೇ ಜನ್ಮದಿನಾಚರಣೆ ಹಾಗೂ ಭಾರತದ ಉಕ್ಕಿನ ಮಹಿಳೆ, ಭಾರತ ಕಂಡ ಧೀಮಂತ ನಾಯಕಿ ಹಾಗೂ ಮಾಜಿ ಪ್ರಧಾನಿಗಳಾದ ಭಾರತ ರತ್ನ ಇಂದಿರಾ ಗಾಂಧಿ ಅವರ 38ನೇ ವರ್ಷದ ಪುಣ್ಯಸ್ಮರಣೆ ಆಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಅಲ್ಲಂ ಪ್ರಶಾಂತ್, ಕೆಪಿಸಿಸಿ ಸದಸ್ಯ ಮಹಮ್ಮದ್ ಗೌಸ್, ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಕುಮಾರಮ್ಮ, ಕೆ.ಬಿ.ಗೋಪಿ ಕೃಷ್ಣ, ಕಾರ್ಯದರ್ಶಿ ಜಿ.ಎಸ್.ಈರನ ಗೌಡ, ಶೋಭಾ ಕಾಳಿಂಗ, ಐಎನ್ಟಿಯುಸಿ ಅಧ್ಯಕ್ಷ ಕೆ. ತಾಯಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಂಜುಳಾ, ಕಾಂಗ್ರೆಸ್ ಮುಖಂಡರು ಬಿ. ರುದ್ರ್ಪ, ಬಿ.ಎ.ಮಲ್ಲೇಶ್ವರಿ ಸಿ.ಅತ್ತಾಉಲ್ಲಾ, ಅಫಕ್ ಹುಸೇನ್, ಸುನೀತಾ, ಜ್ಯೋತಿ, ಲಕ್ಷ್ಮಿದಾಸ್, ಲಿಂಗರಾಜ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.