ಮನರಂಜನೆ

ಅಮಿತಾಭ್ ಬಚ್ಚನ್ @79

ಅಮಿತಾಭ್ ಬಚ್ಚನ್ @79

ನವದೆಹಲಿ, ಅ.11: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಸೋಮವಾರ ತಮ್ಮ 79 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಶುಭಾಶಯದ ಮಹಾಪೂರವೇ ಹರಿದಿದೆ.

ಇನ್ ಸ್ಟಾಗ್ರಾಮ್‌ ನಲ್ಲಿ ಹಸಿರು ಬೂಟುಗಳು ಮತ್ತು ಬಗಲಿನಲ್ಲಿ ಸೊಗಸಾದ ಚೀಲ ಹಾಕಿ ನಡೆಯುತ್ತಿರುವ ಫೋಟೋ ಕೊಲಾಜ್ ಪೋಸ್ಟ್ ಮಾಡಿರುವ ಅಮಿತಾಭ್, "... 80 ನೇ ವಾಕಿಂಗ್…" ಎಂಬ ಶೀರ್ಷಿಕೆ ನೀಡಿದ್ದಾರೆ.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಕೇಕ್ ಕತ್ತರಿಸಲು ಅವರ ಅಭಿಮಾನಿಗಳು 'ಜಲ್ಸಾ' ನಿವಾಸದ ಹೊರಗೆ ಜಮಾಯಿಸಿದ್ದರೆ, ಇತ್ತ ಅವರ ಪೋಸ್ಟ್ ಗೆ ಅಭಿಮಾನಿಗಳು ಮತ್ತು ನಟ, ನಟಿಯರು ಪ್ರತಿಕ್ರಿಯಿಸಿದ್ದಾರೆ.

ನಟಿ ಭೂಮಿ ಪೆಡ್ನೇಕರ್, "ಹುಟ್ಟುಹಬ್ಬದ ಶುಭಾಶಯಗಳು ಸರ್” ಎಂದಿದ್ದರೆ, "ದರೋಡೆಕೋರ" ಎಂದು ರಣವೀರ್ ಸಿಂಗ್ ಕಿಚಾಯಿಸಿದ್ದಾರೆ.

ಅಜಯ್ ದೇವಗನ್ ಬಿಗ್ ಬಿ ಜೊತೆಗಿನ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, "ಸರ್, ನಿಮ್ಮನ್ನು ಬೇರೆ ಬೇರೆ ಮಸೂರದ ಮೂಲಕ ನೋಡುವಾಗ ನಿಜವಾದ ಕಲಾವಿದ ಎಂದರೇನು ಎಂದು ನನಗೆ ಕಲಿಸಿದೆ. ಜನ್ಮದಿನದ ಶುಭಾಶಯಗಳು ಪ್ರಿಯ ಅಮಿತ್ ಜಿ” ಎಂದಿದ್ದಾರೆ. 

ಏತನ್ಮಧ್ಯೆ, ಅಭಿಷೇಕ್ ಬಚ್ಚನ್ ಇನ್‌ಸ್ಟಾಗ್ರಾಮ್‌ನಲ್ಲಿ ಹೃದಯಸ್ಪರ್ಶಿ ಟಿಪ್ಪಣಿಯನ್ನು ಬರೆದಿದ್ದಾರೆ ಮತ್ತು ಅವರ ಜೀವನದ ವಿವಿಧ ಹಂತಗಳಲ್ಲಿರುವ ಅವರ ತಂದೆಯ ಹಲವಾರು ಚಿತ್ರಗಳನ್ನು ಒಳಗೊಂಡಿರುವ ವೀಡಿಯೊವನ್ನು ಹಾಕಿದ್ದು, "ನನ್ನ ನಾಯಕ, ನನ್ನ ಆರಾಧ್ಯ, ನನ್ನ ಸ್ನೇಹಿತ, ನನ್ನ ತಂದೆ! ಜನ್ಮದಿನದ ಶುಭಾಶಯಗಳು ಅಪ್ಪ. ನಿನ್ನನ್ನು ಪ್ರೀತಿಸುತ್ತೇನೆ." ಎಂದು ತಿಳಿಸಿದ್ದಾರೆ.

ಬಿಗ್ ಬಿ, ಬಚ್ಚನ್ ಸಾಹಬ್ ಮತ್ತು ಅಮಿತ್ ಜಿ ಎಂದೂ ಕರೆಯಲ್ಪಡುವ ಮೆಗಾಸ್ಟಾರ್ ಅವರು ಅಕ್ಟೋಬರ್ 11 ರಂದು 1942 ರಲ್ಲಿ ಜನಿಸಿದರು.

ಅವರು 1969 ರಲ್ಲಿ 'ಸಾತ್ ಹಿಂದುಸ್ತಾನಿ' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. 1971 ರಲ್ಲಿ ಹೃಷಿಕೇಶ್ ಮುಖರ್ಜಿ ಅವರ 'ಆನಂದ್' ಚಿತ್ರದಲ್ಲಿನ ಡಾ. ಭಾಸ್ಕರ್ ಬ್ಯಾನರ್ಜಿ ಪಾತ್ರಕ್ಕಾಗಿ ಫಿಲ್ಮ್ {ಏರ್ ಅವಾರ್ಡ್ ಪಡೆದುಕೊಂಡರು.  

ಆದಾಗ್ಯೂ, 'ಜಂಜೀರ್' ಮತ್ತು 'ದೀವಾರ್' ಚಲನಚಿತ್ರಗಳಲ್ಲಿ ಅವರ ಪಾತ್ರಗಳಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. 

ಬಿಗ್ ಬಿ ಅವರ ವಿಶಿಷ್ಟ ಮತ್ತು ಶ್ರೀಮಂತ ಧ್ವನಿಯನ್ನು ರವೀಂದ್ರನಾಥ ಟ್ಯಾಗೋರ್ ಅವರ 'ಏಕ ಚೋಲೋ ರೇ' ಸೇರಿದಂತೆ ಹಲವು ಹಾಡುಗಳಲ್ಲಿ ಬಳಸಲಾಗಿದೆ.  ಕೋವಿಡ್ -19 ಜಾಗೃತಿ ಕಾಲರ್ ಟ್ಯೂನ್ ಸೇರಿದಂತೆ ಹಲವಾರು ಸರ್ಕಾರಿ ಯೋಜನೆಗಳಲ್ಲಿ ತಮ್ಮ ಧ್ವನಿಯನ್ನು ನೀಡಿದ್ದಾರೆ. 2002ರಲ್ಲಿ ಪೋಲಿಯೋ ನಿರ್ಮೂಲನೆ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿಯೂ ಜನ ಜಾಗೃತಿ ಮೂಡಿಸಿದ್ದರು.

ಸುದ್ದಿ ಓದಿ