ಬಳ್ಳಾರಿ

ಮಾರುಕಟ್ಟೆ ವೀಕ್ಷಿಸಿದ ಬೈರತಿ ಬಸವರಾಜು; ಸ್ವಚ್ಛತೆ ಕಾಪಾಡಲು ಸೂಚನೆ

ಮಾರುಕಟ್ಟೆ ವೀಕ್ಷಿಸಿದ ಬೈರತಿ ಬಸವರಾಜು; ಸ್ವಚ್ಛತೆ ಕಾಪಾಡಲು ಸೂಚನೆ

ಬಳ್ಳಾರಿ, ಮೇ 12,ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅವರೊಂದಿಗೆ  ನಗರಾಭಿವೃದ್ಧಿ ಸಚಿವ ಬಸವರಾಜ್ ನಗರ ವ್ಯಾಪ್ತಿಯ ನಗರ ಪ್ರದಕ್ಷಿಣೆ ನಡೆಸಿದರು.ತಾಳೂರು  ರಸ್ತೆ, ಬೆಂಗಳೂರು ರಸ್ತೆ,  ಕರಿ ಮಾರಮ್ಮ ದೇವಸ್ಥಾನ, ಚೆಲುವಾದಿ ಕೇರಿ, ಬಾಪೂಜಿನಗರ, ದೊಡ್ಡ ತರಕಾರಿ ಮಾರುಕಟ್ಟೆ, ಸಣ್ಣ ತರಕಾರಿ ಮಾರುಕಟ್ಟೆ, ಹಾಗೂ ಮುನಿಸಿಪಾಲ್ ಗ್ರೌಂಡ್, ಪ್ರದೇಶಗಳಲ್ಲಿ ಸಚಿವರು ತೆರಳಿ ವೀಕ್ಷಿಸಿದರು.ನಗರದಲ್ಲಿ   ಸಾರ್ವಜನಿಕರಿಗೆ ಹೆಚ್ಚಾಗಿ ತೊಂದರೆಯಾಗಿರುವ  ನಗರದ ಸ್ವಚ್ಛತೆ ಒಳಚರಂಡಿ ವ್ಯವಸ್ಥೆ  ಕುಡಿಯುವ ನೀರು ಹಾಗೂ ನೈರ್ಮಲ್ಯತೆ ವಿವಿಧ ಮೂಲಸೌಕರ್ಯಗಳ ಬಗ್ಗೆ ಖುದ್ದು ಸಚಿವರ ಭೇಟಿ  ನೀಡಿ ಪರಿಶೀಲಿಸಿದರು.  ಸಮಸ್ಯೆಗಳು ಸೂಕ್ತ ರೀತಿ ನಿರ್ವಹಣೆ ಯಾಗಬೇಕೆಂದು  ಸಂಬಂಧಪಟ್ಟ ಸೂಕ್ತ ರೀತಿ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು.ಈ ಸಂದರ್ಭದಲ್ಲಿ  ಮಹಾನಗರಪಾಲಿಕೆ ಆಯುಕ್ತರಾದ ತುಷಾರಮಣಿ, ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು,  ಬಳ್ಳಾರಿ ರಾಯಚೂರು ಕೊಪ್ಪಳ ಕೆ ಎಂ ಎಫ್ ನಿರ್ದೇಶಕ ಜಿ. ವೀರಶೇಖರ್ ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯರಾದ  ಮೌತ್ಕರ್ ಶ್ರೀನಿವಾಸರೆಡ್ಡಿ, ಮಲ್ಲನಗೌಡ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸುದ್ದಿ ಓದಿ