ತೈಲ ಬೆಲೆ ಇಳಿಕೆ ಪ್ರಧಾನಿಗೆ ಬಿರಾದಾರ ಅಭಿನಂದನೆ
ಇಂಡಿ04: ದೀಪಾವಳಿ ಹಬ್ಬಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೈಲ ಬೆಲೆ ಇಳಿಕೆ ಮಾಡಿ ಜನರಿಗೆ ಅನುವು ಮಾಡಿಕೊಟ್ಟಿವೆ ಎಂದು ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಜನರ ಕಷ್ಟಗಳನ್ನು ಅರಿತ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ರಾಜ್ಯ ಜನಪ್ರೀಯ ಮುಖ್ಯಮಂತ್ರಿಗಳಿಗೆ ಅಭಿನಂದಿಸುವದಾಗಿ ತಿಳಿಸಿದರು.
ದೇಶದಲ್ಲಿ ಮೋದಿ ಅವರ ಅವಧಿಯಲ್ಲಿ ಸಾಕಷ್ಟು ಅಭಿವೃಧ್ಧಿ ಕಾರ್ಯಗಳಾಗಿವೆ. ರಾಜ್ಯದಲ್ಲೂ ಬಿಜೆಪಿ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ದೀಪಾವಳಿ ಸಂಭ್ರಮವನ್ನು ಹೆಚ್ಚಿಸಲು ಮೋದಿ ಹಾಗೂ ರಾಜ್ಯ ಸರಕಾರಗಳು ಜನರಿಗೆ ತೈಲ ಬೆಲೆ ಇಳಿಕೆ ಮಾಡಿ ಬಂಪರ್ ಕೊಡುಗೆ ನೀಡಿವೆ ಎಂದರು.
ಫೋಟೊ ಕ್ಯಾಪ್ಸನ್ 04 ಇಂಡಿ 02: ಕಾಸುಗೌಡ ಬಿರಾದಾರ ಭಾವಚಿತ್ರ.