ಬಳ್ಳಾರಿ

ಭಾರತ್ ಬಂದ್‌ಗೆ ಬೆಂಬಲಿಸಿ ಬೈಕ್‌ರ್ಯಾಲಿ

ಭಾರತ್ ಬಂದ್‌ಗೆ ಬೆಂಬಲಿಸಿ ಬೈಕ್‌ರ್ಯಾಲಿ

ಬಳ್ಳಾರಿ 26:   ಸಂಯುಕ್ತ ಹೋರಾಟಕರ್ನಾಟಕದ ವತಿಯಿಂದ ಸೆ. 27ರ ಭಾರತ್ ಬಂದ್‌ಗೆ ಬೆಂಬಲಿಸಿ ಬೈಕ್‌ರಾ​‍್ಯಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಬೈಕ್‌ರಾ​‍್ಯಲಿಯು ಕೆ.ಎಸ್‌.ಆರ್‌.ಟಿ.ಸಿ ಡಿಪೋನಿಂದ ಪ್ರಾರಂಭವಾಗಿದುರ್ಗಮ್ಮಗುಡಿ, ರಾಯಲ್ ಸರ್ಕಲ್, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ಮೋತಿ ಸರ್ಕಲ್, ಕೌಲ್ ಬಜಾರ್, ಟಿ.ಬಿ. ಸ್ಯಾನಿಟೋರಿಯಂ, ಓ.ಪಿ.ಡಿ, ವಿದ್ಯಾನಗರ ಮೂಲಕ ಸಾಗಿ ಎಸ್‌.ಪಿ.ಸರ್ಕಲ್‌ನಲ್ಲಿಕೊನೆಗೊಂಡಿತು.ನೂರಾರು ಸಂಖ್ಯೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರುಇದರಲ್ಲಿ ಪಾಲ್ಗೊಂಡಿದ್ದರು. 

ಎಸ್‌.ಪಿ ಸರ್ಕಲ್ ನಲ್ಲಿವಿವಿಧ ಸಂಘಟನೆಗಳ ಮುಖಂಡರು ಮಾತನಾಡುತ್ತಾ “ಕೇಂದ್ರ ಸರ್ಕಾರ, ಮೂರು ಕೃಷಿ ಕಾಯ್ದೆಗಳನ್ನು ಘೋಷಣೆ ಮಾಡಿದಒಂದು ವರ್ಷ ಹಾಗು ದೆಹಲಿಯಲ್ಲಿನ ರೈತ ಹೋರಾಟಕ್ಕೆ ಹತ್ತು ತಿಂಗಳು ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ “ರೈತಾಪಿ ಕೃಷಿ”ಯನ್ನು ನಾಶ ಮಾಡಿ ‘ಕೃಷಿ’ ಯನ್ನುಕಾರ​‍್ೋರೇಟ್ ಕಂಪನಿಗಳಿಗೆ ಒಪ್ಪಿಸಲುಜಾರಿಗೆತಂದಿರುವ ಮೂರು ಕೃಷಿ ಕಾಯ್ದೆಗಳು ಹಾಗು ವಿದ್ಯುತ್ ಮಸೂದೆಯನ್ನುರದ್ದುಮಾಡಬೇಕು ಹಾಗು ಕೃಷಿ ಉತ್ಪನ್ನಗಳ ಉತ್ಪಾದನೆಯ ವೆಚ್ಚದ ಮೇಲೆ ಶೇ. 50 ರಷ್ಟು ಲಾಭವನ್ನುಖಾತರಿ ಮಾಡುವ “ಕನಿಷ್ಠ ಬೆಂಬಲ ಬೆಲೆ ಕಾನೂನು” ಜಾರಿಗೆತರಬೇಕೆಂದು ಆಗ್ರಹಿಸಿ ಐದುನೂರಕ್ಕು ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿರುವಸಂಯುಕ್ತಕಿಸಾನ್ ಮೋರ್ಚಾ(ಖಏಒ) ಸೆಪ್ಟೆಂಬರ್ 27, 2021 ಕ್ಕೆ “ಭಾರತ್ ಬಂದ್‌”ಗೆಕರೆ ನೀಡಿದೆ,ಈ ಹಿನ್ನೆಲೆಯಲ್ಲಿ ನಾಳೆ ನಡೆಯುತ್ತಿರುವ“ಬಳ್ಳಾರಿ ಬಂದ್‌”ನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ಜನರಲ್ಲಿ ಮನವಿಮಾಡಿಕೊಂಡರು. ಈ ಬೈಕ್‌ರಾ​‍್ಯಲಿಯಲ್ಲಿಆರ್‌.ಕೆ.ಎಸ್ ನ ಈ.ಹನುಮಂತಪ್ಪ, ಕೆ.ಪಿ.ಆರ್‌.ಎಸ್ ನ ಶಿವಶಂಕರ್, ಕರ್ನಾಟಕರಾಜ್ಯರೈತ ಸಂಘ(ಹಸಿರು ಸೇನೆ)ಯ ಸಂಗನಕಲ್‌ಕೃಷ್ಣಪ್ಪ, ಕಾರ್ಮಿಕ ಸಂಘಟನೆಗಳ ಮುಖಂಡರಾದ ಎಐಯುಟಿಯುಸಿ ಯಎ.ದೇವದಾಸ್, ಸಿ.ಐ.ಟಿ.ಯು ನ ಸತ್ಯಬಾಬು, ಸಿ.ಪಿ.ಐನ ನಾಗಭೂಷಣ, ಕೆ.ಎಸ್‌.ಆರ್‌.ಟಿ.ಸಿ ನೌಕರರ ಸಂಘದ ಮುಖಂಡ ಆದಿಮೂರ್ತಿ ಹಾಗೂ ಎ.ಐ.ಡಿ.ಎಸ್‌.ಓ ವಿದ್ಯಾರ್ಥಿ ಸಂಘಟನೆಯ ಗುರಳ್ಳಿ ರಾಜ, ರವಿಕಿರಣ್, ಸೌಮ್ಯ, ಈರಣ್ಣ, ಎ.ಐ.ಡಿ.ವೈ.ಓಯುವಜನ ಸಂಘಟನೆಯಜಗದೀಶ್, ಎ.ಐ.ಎಂ.ಎಸ್‌.ಎಸ್ ಮಹಿಳಾ ಸಂಘಟನೆಯ ಶಾಂತಾ, ಅಹಲ್ಯ, ವಿದ್ಯಾವತಿ, ವಿಜಯಲಕ್ಷ್ಮಿ, ರೇಖಾ, ಜನವಾದಿ ಮಹಿಳಾ ಸಂಘಟನೆಯಚಂದ್ರಕುಮಾರಿ, ಡಿ.ವೈ.ಎಫ್‌.ಐನಎರಿ​‍್ರಸ್ವಾಮಿ, ಎ.ಐ.ವೈ.ಎಫ್‌ನಕಟ್ಟೆಬಸಪ್ಪಮತ್ತುಇನ್ನಿತರ ಸಂಘಟನೆಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. 


ಸುದ್ದಿ ಓದಿ