ಸಿರುಗುಪ್ಪ

ಸಿರುಗುಪ್ಪ ಚುನಾವಣಾ ಸ್ವೀಪ್ ಕಮಿಟಿಯಿಂದ ಮತದಾನ ಜಾಗೃತಿಗೆ ಬೈಕ್ ಜಾಥಾ

ಸಿರುಗುಪ್ಪ  ಚುನಾವಣಾ ಸ್ವೀಪ್ ಕಮಿಟಿಯಿಂದ ಮತದಾನ ಜಾಗೃತಿಗೆ ಬೈಕ್ ಜಾಥಾ

ಶಿರುಗುಪ್ಪ: ವಿದ್ಯಾರ್ಥಿಗಳು ಮತ್ತು ಯುವಜನತೆ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನದ ಮಹತ್ವ ಅರಿತು ತಪ್ಪದೆ ಹಕ್ಕು ಚಲಾಯಿಸಬೇಕು ಎಂದು ಚುನಾವಣಾ ಅಧಿಕಾರಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸತೀಶ್ ಅವರು ಹೇಳಿದರು ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಚುನಾವಣಾ ಕಮಿಟಿಯಿಂದ ಹಮ್ಮಿಕೊಂಡ ಬೈಕ್ ಜಾತಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ 18 ವರ್ಷ ತುಂಬಿದ ಹೊಸ ಮತದಾರರು ಕೂಡಲೇ ಹೆಸರು ನೋಂದಾಯಿಸಲು ಅರಿವು ಮೂಡಿಸಿ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಆಡಳಿತ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ ದೇಶ ಮಾತ್ರವಲ್ಲ ದೇಶದ ಚುಕ್ಕಾಣಿ ಹಿಡಿಯುವ ನಾಯಕರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಲ್ಲಿ ನಿಮ್ಮ ಮತ ವ್ಯರ್ಥವಾಗಬಾರದು ಇಂದು ನಮ್ಮ ಪ್ರಜಾಪ್ರಭುತ್ವದಲ್ಲಿ ಬಡ ಕೂಲಿ ಕಾರ್ಮಿಕರನ್ನಾಗಿರಲಿ ವಂದೇ ಮತ ಒಂದೇ ಮೌಲ್ಯ ನೀಡಿದೆ ಮತ ಚಲಾಯಿಸದೆ ಅಪ ಮೌಲ್ಯ ಮಾಡಬಾರದು ದೇಶದ ಆಡಳಿತ ಚುಕ್ಕಾಣಿ ಯಾರು ಹಿಡಿಯಬೇಕು ಎಂದು ನಿರ್ಧರಿಸು ನಿಮ್ಮ ಅಮೂಲ್ಯ ಹಕ್ಕನ್ನು ತಪ್ಪದೇ ಚಲಾಯಿಸಬೇಕು ಎಂದು ಅವರು ನುಡಿದರು ತಹಸಿಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನಬಸಪ್ಪ ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ ಈರಣ್ಣ ನಗರಸಭಾ ಪೌರಾಯುಕ್ತ ಜೀವನ್ ಕಟ್ಟಿಮನಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೆ ರಂಗಯ್ಯ ಉಪನ್ಯಾಸಕ ಪಂಪಾಪತಿ ಆಹಾರ ಇಲಾಖೆ ಚಿರಸ್ತಿದಾರ ಮಹೇಶ್ ಜಿಲ್ಲಾ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ನೌಶಾದ್ ಅಲಿ ಸೇರಿದಂತೆ ಸಾರ್ವಜನಿಕರಿದ್ದರು. 


ಸುದ್ದಿ ಓದಿ