ಕಾಂಗ್ರೆಸ್ ಮಡಿಲಿಗೆ ಬಿದರಕುಂದಿ ಪಂಚಾಯತ.
ಮುದ್ದೇಬಿಹಾಳ : ತಾಲೂಕಿನ ಬಿದರಕುಂದಿ ಗ್ರಾಮ ಪಂಚಾಯತ ಎರಡನೇ ಅವದಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಚರ ಆಯ್ಕೆ ಕುರಿತು ಸೋಮವಾರ ನಡೆದ ಚುನಾವಣೆಯಲ್ಲಿ. ಅದ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರೂಪಾ ಸಂಗಪ್ಪ ಚಲವಾದಿ, ಉಪಾಧ್ಯಕ್ಷರಾಗಿ ಗುರುಬಾಯಿ ಹಿರೇಮಠ, ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ರೂಪಾ ಸಂಗಪ್ಪ ಚಲವಾದಿ ಇವರಿಗೆ 9 ಮತಗಳು ಪಡೆದು ಜಯಶಾಲಿಯಾದರೆ 9ರಲ್ಲಿ 1 ಮತ ತೀರಸ್ಕೃತವಾಯಿತು. ಪ್ರತಿಸ್ಪರ್ಧಿ ವಿಜಯಲಕ್ಷ್ಮೀ ಸಿದ್ದಪ್ಪ ಚಲವಾದಿ ಇವರಿಗೆ 6 ಮತಗಳು ಪಡೆದು ಪರಾಭವಗೊಂಡರು, ಇನ್ನೂ ಉಪಾಧ್ಯಕ್ಷ ಗುರುಬಾಯಿ ಹಿರೇಮಠ 10 ಮತಗಳನ್ನು ಪಡೆದುಕೊಂಡು ಆಯ್ಕೇಯಾದರು ಎಂದು ಚುನಾವಣೆ ಅಧಿಕಾರಿ ಎಸ್ ಜಿ ಸಂಗಾಲಿಕ ಘೋಷಣೆ ಮಾಡಿದರು. ಗ್ರಾಮ ಪಂಚಾಯತಿಯ ಒಟ್ಟು 15 ಜನ ಸದಸ್ಯರ ಬಲ ಇರುವ ಈ ಗ್ರಾಮ ಪಂಚಾಯತಿಗೆ ಒಟ್ಟು 15 ಜನ ಸದಸ್ಯರು ಚುನಾವಣೆಯ ಪ್ರಕ್ರೀಯೆಯಲ್ಲಿ ಪಾಲ್ಘೋಂಡಿದ್ದರು. ಈ ಚುನಾವಣೆಯಲ್ಲಿ ಅಭಿವೃದ್ದಿ ಅಧಿಕಾರಿ ಪ್ರಭುದೇವ ಜಾವೂರ, ಕರ ವಸೂಲಿಗಾರ ರಾಜೇಸಾ ಚ ಬನ್ನೇಟ್ಟಿ, ಗ್ರಾಂ ಪಂ ಸದಸ್ಯ ಮಲ್ಲು ದೊಡಮನಿ, ಜನ್ನತಬಿ ದೊಡಮನಿ, ಪೀರದೋಷ ಮೌ ಬನ್ನೇಟ್ಟಿ, ನೀಲಮ್ಮ ಬ ಕೋಳೂರ, ಲಕ್ಕನಗೌಡ ಬಿರಾದಾರ, ಹಣಮಂತ ಚಲವಾದಿ, ಲಾಲಬಿ ಖಾ ಮುಲ್ಲಾ, ಮುಖಂಡರಾದ ವೈ ಎಚ್ ವಿಜಯಕರ, ಎನ್ ಆರ್ ಗುರಕಾರ, ಗೀರಿಶ ಬಿಜ್ಜೂರ, ಬಸವರಾಜ ಕೋಳೂರ, ಕೆ ಕೆ ಬನ್ನೇಟ್ಟಿ, ಈರನಗೌಡ ಪಾಟೀಲ್, ಬಿಮನಗೌಡ ಪಾಟೀಲ್, ಎಂ ಪಿ ಮುರಾಳ ರಜಾಕ್ ದೊಡಮನಿ, ಕೆ ಎಲ್ ಬಸರಕೊಡ, ಬಿಮಣ್ಣ ಹಣಮಸಾಗರ, ಮಡಿವಾಳಯ್ಯಾ ಹಿರೇಮಠ, ಎಲ್ ಎಂ ಅವಟಿ, ಚನ್ನಮಲ್ಲಪ್ಪ ಕಡೂರ, ವಿರೇಶ ಬಜಂತ್ರಿ ಸಂಗಪ್ಪ ಚಲವಾದಿ, ಇತರರು ವಿಜಯೋತ್ಸವದ ಸಂಭ್ರಮಾಚರಣೆ ಮಾಡಿದರು.