ಮುದ್ದೆಬಿಹಾಲ್

ಬಿದರಕುಂದಿ ಆದರ್ಶ ವಿದ್ಯಾಲಯ ತಾಲೂಕಿನಲ್ಲಿಯೇ ಮಾದರಿಯ ಶಾಲೆ

ಬಿದರಕುಂದಿ ಆದರ್ಶ ವಿದ್ಯಾಲಯ ತಾಲೂಕಿನಲ್ಲಿಯೇ ಮಾದರಿಯ ಶಾಲೆ
Bidarakundi Adarsh ​​Vidyalaya is a model school in the taluk

ಮುದ್ದೇಬಿಹಾಳ 29: ತಾಲೂಕಿನ ಬಿದರಕುಂದಿ ಗ್ರಾಮದ ವ್ಯಾಪ್ತಿಯ ಆದರ್ಶ ವಿದ್ಯಾಲಯ(ಆರ್ ಎಮ್ ಎಸ್ ಎ) ಶಾಲೆಯಲ್ಲಿ ಯಾವುದೇ ಗೊಂದಲಗಿಳಿಲ್ಲ ತೊಂದರೆಗಳಿಲ್ಲ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವ ಮೂಲಕ ತಾಲೂಕಿನಲ್ಲಿಯೇ ಮಾದರಿಯ ಶಾಲೆ ಎಂಬ ಹೆಗ್ಗಳಿಕೆ ಪಡೆದಿದೆ ಕಾರಣ ಸರಕಾರ ಮಕ್ಕಳಿಗೆ ಇನ್ನಷ್ಟು  ಸೌಲಭ್ಯಗಳ ಅವಶ್ಯಕತೆ ಜೊತೆಗೆ ರಸ್ತೆ ನಿರ್ಮಿಸುವುದು ಅಗತ್ಯವಾಗಿದೆ ಎಂದು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಗುಂಡಣ್ಣ ಕೊಟಗಿ ಹೇಳಿದರು. 

ತಾಲೂಕಿನ ಬಿದರಕುಂದಿ ಗ್ರಾಮದ ವ್ಯಾಪ್ತಿಯ ಆದರ್ಶ ವಿದ್ಯಾಲಯ(ಆರ್ ಎಮ್ ಎಸ್ ಎ) ಶಾಲೆಯಲ್ಲಿ ನಡೆದ ಪಾಲಕರ ಸಭೆಯನ್ನು ಉದ್ದೇಶಿಸಿ ಅವ ರು ಮಾತನಾಡಿದರು. 

ಆರ್ ಎಂ ಎಸ್ ಎ ಶಾಲೆಯೂ ಹಲವು ವರ್ಷಗಳಿಂದ ಎಸ್ ಎಸ್ ಎಲ್ ಸಿ ಪರಿಕ್ಷೇಯಲ್ಲಿ ನೂರಕ್ಕೆ ನೂರು ಫಲಿತಾಂಶ ನೀಡುತ್ತಲೇ ಬಂದಿದದೆ, ಶಾಲೆಯಲ್ಲಿ ತಜ್ಞ ಶಿಕ್ಷಕರು ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಉತ್ತಮ ಬೋಧನೆ ಜೊತೆಗೆ ವಿವಿಧ ಸಾಂಸ್ಕೃತಿಕ, ಕ್ರೀಡೆ ಹೀಗೆ ಮಕ್ಕಳ ಮನೋಬಲ ಆತ್ಮಸ್ಥೈರ್ಯ ತುಂಬುವ ಮತ್ತು ಸ್ಪರ್ಧಾತ್ಮಕ ಪರಿಕ್ಷೇಗಳನ್ನು ಹೇಗೆ ಎದುರಿಸಬೇಕು ಎಂಬ ತರಬೇತಿ ನೀಡುವ ಮೂಲಕ ಸೈ ಎನಿಸಿಕೊಂಡಸಿದ್ದಾರೆ.  ಆದರೇ ಶಾಲೆಯ ಸ್ವಚ್ಛತೆ ಸಿಬ್ಬಂದಿ ವರ್ಗದವರು ಒಬ್ಬರೆ ಇರುವುದರಿಂದ ಸ್ವಚ್ಛತಾ ಸಿಬ್ಬಂದಿ ನೇಮಕದ ಅವಶ್ಯತೆ ಇರುವುದರಿಂದ ಶಾಸಕರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅವರೂ ಕೂಡ ಸಿಬ್ಬಂದಿ ಸೇರಿದಂತೆ ಇತರೇ ಮೂಲಬೂತ ಸೌಲಭ್ಯ ವದಗಿಸುವ ಭರವಸೆ ನೀಡಿದ್ದಾರೆ. ಆದರೇ ಕೆಲವರು ದುರುದ್ದೇಶದಿಂದ ಶಾಲೆಯ ಹೆಸರು ಕೆಡಿಸಲು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು  ಎಲ್ಲ ಆರೋಪಗಳ ಸತ್ಯಕ್ಕೆ ದೂರವಾಗಿದೆ ಈ ಶಾಲೆಯ  ಶಿಕ್ಷಕರಂತಹ ಶಿಕ್ಷಕರು ಬೇರೆಲ್ಲೂ ಕಾಣ ಸಾಧ್ಯವಿಲ್ಲ ಯಾರೋ ಒಬ್ಬರು ಒಬ್ಬ ಶಿಕ್ಷಕಿಯರನ್ನೇ ಟಾರ್ಗೇಟ ಮಾಡಿ ಆರೋಪಿಸುವುದು ಸರಿಯಲ್ಲ. ಕಾರಣ  ಪಾಲಕರು ಇಂತಹ ಸುಳ್ಳು ವದಂತಿಗಳಿಗೆ  ಮಾತುಗಳಿಗೆ ಕಿವಿಗೊಡದೇ ನಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ನಾವು ನಿರ್ಧರಿಸಬೇಕು. ಒಂದು ವೇಳೆ ಶಿಕ್ಷಕರು ತಪ್ಪು ಮಾಡುತ್ತಿದ್ದಾರೆ ಎಂದರೆ ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಸರಿಪಡಿಸುವ ಕಾರ್ಯ ಮಾಡೋಣ ಎಂದರು. 

ಈ ವೇಳೆ ಆರ್ ಎಂ ಎಸ್ ಎ ಶಾಲೆಯ ಮುಖ್ಯ ಶಿಕ್ಷಕ ಅನೀಲಕುಮಾರ ರಾಠೋಡ,  ಪಾಲಕರಾದ ಶರಣಗೌಡ  ಬಿರಾದಾರ, ಸಂತೋಷ ಸಾಸನೂರ, ಮಹಾಂತಗೌಡ ಪಾಟೀಲ, ಎಸ್ ಟಿ ಹೆಬ್ಬಾಳ, ಎಸ್ ಪಿ ರಾಯಗೊಂಡ, ವಿ ಎಸ್ ನಾಯಕ, ನ್ಯಾಯವಾದಿ ಎಸ್ ಎಂ ಚಿಲ್ಲಾಳಶೇಟ್ಟೆರ, ಎಂ ಕೆ ಹಿರೇಮಠ,  ಕವಿತಾ ಪಾಟೀಲ, ಲಲಿತಾ ಶ್ಯಾಬಾದಿ, ರಾಜು ರಾಠೋಡ, ವಿನಾಯಕ ಪೂಜಾರಿ,ರೂಪಾ ಮೇಟಿ, ವಿಜಯಲಕ್ಷ್ಮೀ ಬಡಿಗೇರ, ಶೋಭಾ ಕನ್ನೂರ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ