ಬಳ್ಳಾರಿ

ಬುಡಾ ಆವರಣದ ಇಂದಿರಾ ಕ್ಯಾಂಟಿನ್ ಸ್ಥಳಾಂತರಕ್ಕೆ ಭೋವಿ ಮಹಾಸಭಾ ಖಂಡನೆ

ಬುಡಾ ಆವರಣದ ಇಂದಿರಾ ಕ್ಯಾಂಟಿನ್ ಸ್ಥಳಾಂತರಕ್ಕೆ ಭೋವಿ ಮಹಾಸಭಾ ಖಂಡನೆ

ಬಳ್ಳಾರಿ 21: ಬಳ್ಳಾರಿ ನಗರದ ಮೋತಿ ಸರ್ಕಲ್‌ನ ಹೃದಯ ಭಾಗದ ಬುಡಾ ಕಛೇರಿ ಆವರಣ ದಲ್ಲಿರುವ ಇಂದಿರಾ ಕ್ಯಾಂಟಿನ್‌ನನ್ನು ಅದೇ ಆವರಣದ ಬೇರೊಂದು ಕಡೆ ಮೂಲೆಗೆ ಸ್ಥಳಾಂತರ ಮಾಡಿ ಹಾಲಿ ಕ್ಯಾಂಟಿನ್ ಇರುವ ಜಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸುವುದಾಗಿ ಈಗಿನ ಬುಡಾ ಅಧ್ಯಕ್ಷರು ಮತ್ತು ಬಳ್ಳಾರಿ ನಗರ ಶಾಸಕರು ಯೋಜಿಸಿರುವುದನ್ನು ಭೋವಿ ವಡ್ಡರ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ.  

ಹಾಲಿ ಕ್ಯಾಂಟಿನ್ ಇರುವ ಜಾಗ ಸಾರ್ವಜನಿಕರಿಗೆ ಮತ್ತು ಬಡಬಗ್ಗರಿಗೆ ಹಾಗೂ ನಿರ್ಗತಿಕರಿಗೆ ಅನ್ನದಾನ ಕೇಂದ್ರವಾಗಿರುತ್ತದೆ. ಮತ್ತು ಸಾರ್ವಜನಿಕರಿಗೆ ಕೈಗೆಟುಕುವ ಸ್ಥಳದಲ್ಲಿದೆ. ಇದರಿಂದ ಪರ ಊರಿನಿಂದ ಬಂದ ಜನರಿಗೆ ಇಂದಿರಾ ಕ್ಯಾಂಟಿನ್ ತುಂಬಾ ಅನುಕೂಲವಾಗಿದೆ. ಬುಡಾವತಿಯಿಂದ ನಿರ್ಮಿಸಲು ಉದ್ಧೇಶಿಸಿರುವ ವಾಣಿಜ್ಯ ಕಟ್ಟಡವನ್ನು ಬೇರೆ ಎಲ್ಲಿಯಾದರೂ ನಿರ್ಮಿಸಲಿ ಆದರೆ ಇಂದಿರಾ ಕ್ಯಾಂಟಿನ್ ಸ್ಥಳಾಂತರ ಮಾಡಿ ಬಡಬಗ್ಗರು ಮತ್ತು ನಿರ್ಗತಿಕರ ಹೊಟ್ಟೆ ಮೇಲೆ ಹೊಡೆಯಬಾರದೆಂದು ಭೋವಿ ಮಹಾಸಭಾ ತೀವ್ರವಾಗಿ ವಿರೋಧಿಸುತ್ತದೆ ಎಂದು ಜಿಲ್ಲಾಧ್ಯಕ್ಷ ವಿ ಬಿ ಮಲ್ಲಯ್ಯನವರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿರುತ್ತಾರೆ.  

ಮಹಾಸಭಾದ ಜಿಲ್ಲಾಧ್ಯಕ್ಷರ ವಿ ಬಿ ಮಲ್ಲಯ್ಯ, ಜಿಲ್ಲಾ ಕಾರ್ಯಾಧ್ಯಕ್ಷ ವಿ ಜಗನ್ನಾಥ ಅಂದ್ರಾಳ್, ನೆಟ್ಟಿಕಂಟಯ್ಯ ಯರಗುಡಿ, ಕೃಷ್ಣ ಸಂಗನಕಲ್ಲು, ಈ.ಜಿ.ರೆಡ್ಡಿ ಚರಕುಂಟೆ, ವಿ ಮಾರೆಣ್ಣ ಅಂದ್ರಾಳ್ ಮತ್ತು ಇತರೆ ಪದಾಧಿಕಾರಿಗಳು ಮಾನ್ಯ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಇವರಲ್ಲಿ ಇವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. 


ಸುದ್ದಿ ಓದಿ