ಇಂಡಿ

ಭೀಮಾಂತರಂಗ ಆನ್‌ಲೈನ್ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮ

ಭೀಮಾಂತರಂಗ ಆನ್‌ಲೈನ್ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮ
ಪಟ್ಟಣದ ಭೀಮಾಂತರಂಗ ಆನ್ ಲೈನ್ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮ ರವಿವಾರ ಜರಗಿತ್ತು.

ಇಂಡಿ27:  ಹಲಸಂಗಿ ಎಂಬ ಕುಗ್ರಾಮದಲ್ಲಿದ್ದು ಆದಿಲ್ ಶಾಹಿ ಮನೆತನದಿಂದ ಪಟೇಲ್ ಹೆಸರು ಪಡೆದು ಮದುರಚನ್ನರ ಓದನ್ನು ಕೇಳಿಸಿಕೊಂಡು ಮನನ ಮಾಡತ್ತಾ ಬೆಳೆದ ಧೂಲಾಸಾಬ ಅವರು ಜಿಲ್ಲೆ, ನಾಡು ಕಂಡ ಅಪರೂಪದ ಲಾವಣಿಗಳ ಸಂಗ್ರಹಣೆಕಾರ ಆಗಿದ್ದರು ಎಂದು ಸಾಹಿತಿ ಡಾ. ಚನ್ನಪ್ಪ ಕಟ್ಟಿ ಅಭಿಪ್ರಾಯಪಟ್ಟರು. 

ರವಿವಾರ ಪಟ್ಟಣದ ಭೀಮಾಂತರಂಗ ಆನ್ ಲೈನ್ ಸಾಹಿತ್ಯಕ-ಸಾಂಸ್ಕೃತಿಕ ಜಗಲಿ ವತಿಯಿಂದ ಜರುಗಿದ ಪಿ ಧೂಲಾಸಾಬ ಕುರಿತು ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದರು. 

ಕೈಬರಹದಲ್ಲಿ ಬರೆದು ಪತ್ರಿಕೆಗಳನ್ನು ಹಂಚಿ, ಲೇಖನಗಳನ್ನು ಬರೆದು, ಹಲಸಂಗಿ ಗೆಳೆಯರ ಬಳಗದ ಸಾಹಿತ್ಯದ ಕಂಪನ್ನು ಹೊರಸೂಸಿದರು. ಸ್ವಾತಂತ್ರ್ಯಕ್ಕಾಗಿ ಪಣ ತೊಟ್ಟು ಸ್ವಾತಂತ್ರ್ಯದ ಸಿಗುವವರೆಗೂ ಮದುವೆ ಆಗುವುದಿಲ್ಲ ಹಾಗೂ ತಲೆಯ ಜಡೆ ಕಟ್ಟುವದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ದೂಲಾಸಾಬ, ಮದುವೆಯಾಗದೇ ಬಾಳಿದ ಮಹಾನ ನೇತಾರ ಎಂದು ಹೇಳಿದರು. ಬೇಂದ್ರೆ ಕಾರಂತರೊಂದಿಗೆ ನಿಕಟ ಸಂಪರ್ಕ ಹೊಂದಿ ಹಲಸಂಗಿಯಲ್ಲಿ ಶಾರದಾ ವಾಚನಾಲಯ ಆರಂಭಿಸಿದ ಹೆಗ್ಗಳಿಕೆ ಧೂಲಾಸಾಬರದ್ದು. ಜೀವನ ಪೂರ್ತಿ ಸಂಚಾರಿಯಾಗಿ ಒಂದು ವರ್ಷದಲ್ಲಿ ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಓದಿ, ತನ್ನ ಜ್ಞಾನ ಪಾಂಡಿತ್ಯ ಹೆಚ್ಚಿಸಿಕೊಂಡು ದೂಲಾಸಾಬ ಇಂದಿಗೂ ಉತ್ಸಾಹದ ಚಿಲುಮೆಯಾಗಿ ಶೃಂಗಾರದ ಲಾವಣೆಗಳನ್ನು ಬರೆದು ಹೆಸರುವಾಸಿಯಾದವರು. ಹಾಗೂ ರತ್ನದಂತಹ ಎರಡು ಕೃತಿಗಳನ್ನು ಈ ಸಾರಸ್ವತ ಲೋಕಕ್ಕೆ ಕೊಟ್ಟರು ಎಂದು ಹೇಳಿದರು. 

ಖ್ಯಾತ ಸಾಹಿತಿಗಳಾದ ಡಾ. ರಾಗಂ ಅವರು ಅಧ್ಯಕ್ಷತೆವಹಿಸಿ ಮಾತನಾಡಿ. ಗಾಂಧಿಜಿಯವರಿಂದ ಪ್ರೇರಿತರಾಗ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಸಂಘಟನೆ ತರಬೇತಿ ಮೂಲಕ ಬೆಳೆದವರು. ಸಾಹಿತ್ಯ-ಸ್ವಾತಂತ್ರ್ಯ ರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ನಿಸರ್ಗದ ಸಂಗತಿಗಳನ್ನು ಕವನಗಳಲ್ಲಿ ಮೂಡಿಸಿ ಓದು ಬರಹದ ಮೂಲಕ ಸಾಹಿತ್ಯ ಶ್ರೀಮಂತಗೊಳಿಸಿದ ಅವರ ಸೇವೆ ಅನುಪಮವಾದುದ್ದು ಎಂದು ಹೇಳಿದರು. 

ನಾಡಿನ ಜನಪದ ವಿದ್ವಾಂಸರಾದ ಶ್ರೀರಾಮ ಇಟ್ಟಣ್ಣವರ ಯಲಪ್ಪ ಯಾಕೊಳ್ಳಿ, ಡಾ. ಎಂ.ಎಸ್‌. ಮದಭಾವಿ,ಸಂಶೋಧಕರಾದ ಡಿ.ಎನ್‌. ಅಕ್ಕಿ, ಡಾ. ಎಸ್‌.ಕೆ.ಕೊಪ್ಪ ಎ.ಎಸ್‌. ಗಾಣಿಗೇರ, ಬಸವರಾಜ ಕಿರಣಗಿ, ಸಂತೋಷ ಬಂಡೆ, ಶ್ರೀದರ ಹಿಪ್ಪರಗಿ, ಮೊಯಿನ್ ಮುಲ್ಲಾ, ಈರಣ್ಣ ಕಂಬಾರ, ಸುಜಾತಾ ಬಿಳಗಿ, ಪುಂಡಲೀಕ ಸಣ್ಣಾರ, ರಾಮಚಂದ್ರ ಚೋಪಡೆ ಸೇರಿದಂತೆ ಸಾಹಿತಿಗಳು ಭಾಗವಹಿಸಿದ್ದರು.ವೈ.ಜಿ.ಬಿರಾದಾರ ಸ್ವಾಗತಿಸಿದರು ಸಿ.ಎಂ. ಬಂಡಗಾರ ನಿರೂಪಿಸಿ ವಂದಿಸಿದರು. 

ಸುದ್ದಿ ಓದಿ