ಭಿಮಾನಾಯ್ಕ್ ಗೆಲುವು ನಿಶ್ಚಿತ : ಕಾಂಗ್ರೇಸ್ ಮುಖಂಡ ಹೆಗ್ಡಾಳ್ ಶ್ರೀನಿವಾಸ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ.ಏ.17 : ಕ್ಷೇತ್ರದಲ್ಲಿ ಬಿಮಾನಾಯ್ಕ್ ಅಭಿವೃಧ್ಧಿಗಳ ಮಹಾ ಪೂರವನ್ನೆ ಹರಿಸಿದ್ದಾರೆ, ಈ ಬಾರಿ ಖಂಡಿತ ಭರ್ಜರಿ ಅಂತರದಿಂದ ಭಿಮಾನಾಯ್ಕ್ ಗೆಲುವು ಸಾಧಿಸಲಿದ್ದರೆ ಎಂದು ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಹೆಗ್ಡಾಳ್ ಶ್ರೀನಿವಾಸ ಹೇಳಿದರು.
ಪಟ್ಟಣದ ಅವರ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಅವರು ಮಾತನಾಡಿ ಕ್ಷೇತ್ರದಲ್ಲಿ ಭಿಮಾನಾಯ್ಕ್ ಗೆಲುವು ಸಾಧಿಸಲು ಪ್ರಮುಖ ಕಾರಣಗಳೆಂದರೆ ರೈತಾಪಿ ವರ್ಗಕ್ಕೆ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು, ಇಡೀ ವಿಶ್ವವೇ ತಲ್ಲಣಗೊಂಡ ಮಾಹಾ ಮರಿ ಕರೋನಾ ಹಾವಳಿಯಲ್ಲಿ ಬಡವರಿಗೆ ಅಹಾರ ಪೊಟ್ಟಣಗಳ ವಿತರಣೆ, ಶೈಕ್ಷಣಿಕವಾಗಿ ಸಾಧಕ ಶಿಕ್ಷಕರಿಗೆ ಪ್ರೋತ್ಸಹ ಹಾಗೂ ನೆನಪಿನ ಕಾಣಿಕೆ, ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿದ್ದಾರೆ, ನಗರದಲ್ಲಿ ದ್ವಿಪಥ ರಸ್ತೆಗಳ ಮೂಲಕ ನಗರದ ಅಂದ ಹೆಚ್ಚಿಸಿದ್ದಾರೆ ಈ ಎಲ್ಲಾ ಸೌಲಭ್ಯಗಳನ್ನು ಪಡೆದ ಹಾಗೂ ಅಭಿವೃಧ್ಧಿ ಕಂಡು ಕ್ಷೇತ್ರದ ಜನತೆ ಮತ ನೀಡುವುದರ ಜೊತೆ ಅವರಿಗೆ ಮತ ಹಾಕಿಸುವವರು ಹಾಗೂ ಕ್ರಿಕೇಟ್ನಲ್ಲಿ ಸತತವಾಗಿ ಮೂರು ಸಿಕ್ಸ್ಗಳನ್ನು ಬಾರಿಸಿ ಹ್ಯಾಟ್ರಿಕ್ ಸಿಕ್ಸ್ ಪಡೆಯುತ್ತಾರೋ ಹಾಗೆಯೇ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಈ ಬಾರಿ ಭೀಮಾನಾಯ್ಕ್ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾರೆ ಎಂದರು.