ಅಲ್ಪಸಂಖ್ಯಾತ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಭಾವೀಕಟ್ಟಿ ನೇಮಕ
ಶಿಗ್ಗಾವಿ 10: ತಾಲೂಕಿನ ಹುಲಗೂರ ಗ್ರಾಮದ ಮಾಜಿ ತಾಲೂಕ ಪಂಚಾಯತ ಸದಸ್ಯ ಯೂಸುಫಸಾಭ ಭಾವೀಕಟ್ಟಿ ಅವರನ್ನು ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ನೂತನ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಿ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿಧಾನ ಪರಿಷತ್ತ ಸದಸ್ಯರಾದ ಕೆ.ಅಬ್ದುಲ ಜಬ್ಬಾರ ಆದೇಶ ಹೊರಡಿಸಿದ್ದಾರೆ.