ಬಳ್ಳಾರಿ

ಭಾಸ್ಕರ್ ರಾವ್, ಐಪಿಎಸ್, ಎಡಿಜಿಪಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಭೇಟಿ

ಭಾಸ್ಕರ್ ರಾವ್, ಐಪಿಎಸ್, ಎಡಿಜಿಪಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಭೇಟಿ

ಬಳ್ಳಾರಿ 07: ಭಾಸ್ಕರ್ ರಾವ್, ಐಪಿಎಸ್, ಎಡಿಜಿಪಿ, ರೈಲ್ವೆ, ಬೆಂಗಳೂರು ಇವರು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಭೇಟಿ ನೀಡಿ, ಅವರಿಗೆ ಇರುವಂತ ಇಂಡಸ್ಟ್ರೀಸ್ ಬಗ್ಗೆ, ಟ್ರೇಡ್ ಬಗ್ಗೆ ಅತ್ಯಂತ ತಿಳುವಳಿಕೆಯನ್ನು ಸಂಸ್ಥೆಯ ಪಧಾದಿಕಾರಿಗಳಿಗೆ ತಿಳಿಸಿದರು.  

ಸಂಸ್ಥೆಯ ಸದಸ್ಯರನ್ನು ಉದ್ದೇಶಿಸಿ ಅತ್ಯಂತ ಪ್ರೋತ್ಸಾಹದಾಯಕ ನುಡಿಗಳನ್ನು ಆಡಿದರು. ಇವರೊಂದಿಗೆ ವಿಜಿ. ಕಿರಣ್‍ಕುಮಾರ್,  ಅಂತರರಾಷ್ಟ್ರೀಯ ವ್ಯವಹಾರಗಳು ಮತ್ತು ಸಿಎಸ್‍ಆರ್ ಕಮಿಟಿ, ಎಫ್ ಕೆಸಿಸಿಐ, ಬೆಂಗಳೂರು, ಸೈದುಲ್ ಅದಾವತ,  ಪೋಲಿಸ್ ವರಿಷ್ಠಾದಿಕಾರಿಗಳು, ಬಳ್ಳಾರಿ ಜಿಲ್ಲೆ, ಲಾವಣ್ಯ, ಬಿ. ಎನ್. ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿಗಳು, ಇವರೊಂದಿಗೆ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ, ವಿ. ರವಿಕುಮಾರ, ಅಧ್ಯಕ್ಷರು, ಇವರು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪರಿಚಯವನ್ನು ಅತಿಥಿಗಳಿಗೆ ತಿಳಿಸಿಕೊಟ್ಟರು. 

ಯಶವಂತ ರಾಜ್ ನಾಗಿರೆಡ್ಡಿ, ಗೌರವ ಕಾರ್ಯದರ್ಶಿಗಳು, ಕಾರ್ಯಕ್ರಮವನ್ನು ನಿರ್ವಹಿಸಿ ಸಭೆಗೆ ಆಗಮಿಸಿದ ಅತಿಥಿಗಳನ್ನು, ಪದಾಧಿಕಾರಿಗಳನ್ನು, ವಿವಿಧ ಕಮಿಟಿಗಳ ಚೇರ್ಮನ್‍ಗಳನ್ನು, ಕಾರ್ಯಕಾರಿ ಸಮಿತಿ ಸದಸ್ಯರನ್ನು, ವಿಶೇಷಆಹ್ವಾನಿತರನ್ನು ಮತ್ತು ವಿಶೇಷ ಸಮನ್ವಯ ಸಮಿತಿ ಸದಸ್ಯರನ್ನು ಸ್ವಾಗತಿಸಿದರು. ಈ ಸಭೆಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ರಮೇಶ್ ಗೋಪಾಲ್, ಹಿರಿಯ ಉಪಾಧ್ಯಕ್ಷ ಶ್ರೀನಿವಾಸರಾವ್, ಉಪಾಧ್ಯಕ್ಷ ಬಿ. ಮಹಾರುದ್ರ ಗೌಡ, ಇನ್ನೊರ್ವ ಉಪಾಧ್ಯಕ್ಷ ಮಂಜುನಾಥ, ಜಂಟಿ ಕಾರ್ಯದರ್ಶಿ ಎಸ್ ದೊಡ್ಡನಗೌಡ, ಇನ್ನೊರ್ವ ಜಂಟಿ ಕಾರ್ಯದರ್ಶಿಯಾದ ಗಿರಿಧರ್ ಸೊಂತ, ವಿವಿಧ ಕಮಿಟಿಗಳ ಚೇರ್ಮನ್‍ಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ