ಬಳ್ಳಾರಿ

ಭಗವಾನ್ ಜೀವ್ಹೇಶ್ವರ ಜಯಂತ್ಯೋತ್ಸವ ಆಚರಣೆ

ಭಗವಾನ್ ಜೀವ್ಹೇಶ್ವರ ಜಯಂತ್ಯೋತ್ಸವ ಆಚರಣೆ

ೋಕದರ್ಶನ ವರದಿ 

ಕಂಪ್ಲಿ 21: ಸ್ವಕುಳ ಸಾಳಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸರ್ವರೂ ಸಹಕರಿಸಬೇಕು ಎಂದು ಇಲ್ಲಿನ ಸ್ವಕುಳ ಸಾಳಿ ಸಮಾಜ ಸಂಘದ ಅಧ್ಯಕ್ಷ ಮಳೆಕಾರ ಅಂಜಿನಪ್ಪ ಹೇಳಿದರು. 

ಪಟ್ಟಣದ ಮಾರುತಿನಗರದಲ್ಲಿನ ಸ್ವಕುಳ ಸಾಳಿ ಸಮುದಾಯ ಭವನ ನಿರ್ಮಾಣ ಸ್ಥಳದಲ್ಲಿ ಶುಕ್ರವಾರ ಭಗವಾನ್ ಜೀವ್ಹೇಶ್ವರ ಜಯಂತ್ಯುತ್ಸವ ಆಚರಣೆ ನಿಮಿತ್ತ ಸಂಘದ ನಾಮಫಲಕಕ್ಕೆ ಪೂಜೆ ಸಲ್ಲಿಸಿ, ಸಮಾಜದವರು ಸಂಘಟಿತರಾಗುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ಹೇಳಿದರು. ಸ್ವಕುಳ ಸಾಳಿ ಸಮಾಜ ಸಂಘದ ಪದಾಧಿಕಾರಿಗಳಾದ ಏಕಬೋಟೆ ತಿಪ್ಪಣ್ಣ, ಮಳೆಕಾರ ಭರತಕುಮಾರ್, ಎಂ.ಕೃಷ್ಣ, ಎಸ್‌.ಪ್ರಭಾಕರ, ಎಸ್‌.ಶಿವಕುಮಾರ್, ಎಸ್‌.ಮಲ್ಲಿಕಾರ್ಜುನ, ಎಸ್‌.ಗುರು, ಎಸ್‌.ಮನೋಜ್, ಎಸ್‌.ಮಂಜುನಾಥ, ಎಸ್‌.ರಾಘವೇಂದ್ರ, ಎಂ.ಶ್ರೀಕಾಂತ್, ಎ.ನಾಗರಾಜ್, ಎಸ್‌.ಪ್ರಕಾಶ್ ಸೇರಿ ಸಮಾಜದವರಿದ್ದರು. 

ಆ007ಕಂಪ್ಲಿಯ ಸ್ವಕುಳ ಸಾಳಿ ಸಮಾಜ ಸಂಘದವರು ಭಗವಾನ್ ಜೀವ್ಹೇಶ್ವರ ಜಯಂತ್ಯುತ್ಸವ ಆಚರಣೆ ನಿಮಿತ್ತ ಸಂಘದ ನಾಮಫಲಕಕ್ಕೆ ಪೂಜೆ ಸಲ್ಲಿಸಿದರು. 


ಸುದ್ದಿ ಓದಿ