ಭಾಗವತ ಗ್ರಂಥ ಮನುಕುಲದ ಉದ್ಧಾರಕ್ಕೆ ಮಾರ್ಗದರ್ಶಕ: ಪಂ ಫಣೀಂದ್ರ ಆಚಾರ್ಯ
ಮುಂಡರಗಿ 11: ಆಧ್ಯಾತ್ಮಕ ಪ್ರಪಂಚದಲ್ಲಿ ಧರ್ಮದ ಆಚರಣೆಯಲ್ಲಿ ಜನತೆ ತೀರ ಹಿಂದೆ ಉಳಿದಿದ್ದಾರೆ. ಮನುಷ್ಯರಾಗಿ ಜನ್ಮತಾಳಿದ ಮೇಲೆ ಪ್ರತಿಯೊಬ್ಬರೂ ಧರ್ಮ, ಸಂಸ್ಕೃತಿಯಲ್ಲಿರಬೇಕು ಎಂದು ಮಾದ್ವಸಿದ್ಧಾಂತದ ಹಲವಾರು ಗ್ರಂಥಗಳು ತಿಳಿಸಿದೆ. ಶ್ರೀಮದ್ ಭಾಗವತ ಗ್ರಂಥ ಸಹಿತ ಇದನ್ನೇ ಸಂದೇಶ ನೀಡಿದೆಂದು ಪಂ ಫಣೀಂದ್ರ ಆಚಾರ್ಯ ಹೇಳಿದರು.
ಪಟ್ಟಣದ ಇಲ್ಲೂರ ತೋಟದಲ್ಲಿರುವ ನಂಜನಗೂಡ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಸೆ.10 ರಂದು ಜರುಗಿದ ಶ್ರೀಮದ್ ಭಾಗವತ ಪ್ರವಚನ ಮಂಗಲೋತ್ಸವದ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಮನುಷ್ಯನ ಪ್ರಾಮಾಣಿಕತೆ ಇರಬೇಕಾದರೇ ಭಾಗವತ ಗ್ರಂಥ ಮುಖ್ಯವಾಗಿದೆ. ಭಾಗವತಅನೇಕ ಸಂದೇಶಗಳು ಮನುಕುಲದ ಉದ್ಧಾರದ ಮಾರ್ಗದರ್ಶನವಾಗಿದೆ. ಪ್ರಾಮಾಣಿಕತೆಯ ಜೀವನಕ್ಕೆ ಭಾಗವತ ಸಾಕ್ಷಿ ಆಗಿದೆಂದರು. ಸಾಲಿಗ್ರಾಮ ಪೂಜೆಯಿಂದ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರಗೊಳ್ಳುತ್ತವೆ. ಬದುಕಿನಲ್ಲಿ ಹಣವೇ ಪ್ರಧಾನ ವಿಷಯವಾಗಬಾರದು. ಭಾಗವತ ಸಿದ್ಧಾಂತದ ವಿಚಾರಗಳು ಕೇವಲ ಮಾಧ್ವರಿಗೆ ಸೀಮಿತವಾಗಿಲ್ಲ, ಪ್ರಪಂಚದ ಪ್ರತಿಯೊಂದು ಜನಾಂಗದವರೂ ಭಾಗವತ ಸಂದೇಶಗಳು ಪಾಲಿಸಬೇಕು ಎಂದರು.
ಬದುಕಿಗೆ ಬೇಕಾದ ಹಲವಾರು ವಿವಿಧ ಮಾರ್ಗಗಳನ್ನು, ತತ್ವವಿಚಾರಗಳನ್ನು ಪ್ರವಚನದಲ್ಲಿ ಬಹುಸ್ವಾರಸ್ಯಕರವಾಗಿ ಜನತೆಗೆ ತಿಳಿಸಿ, ಶ್ರೀಮಠದ ಭೂದಾನಿ ನಾರಾಯಣ ಇಲ್ಲೂರ ಅವರು ಭಾಗವತವನ್ನು ಪ್ರಾರಂಭಿಸಿ ಭಾಗವತ ರಸದೌತಣವನ್ನು ನೀಡಿದ್ದಾರೆ. ಶ್ರೀಮಠದಲ್ಲಿ ನಿರಂತರವಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು, ಧರ್ಮ, ಸಂಸ್ಕೃತಿ ಪ್ರವಚನ ನಡೆಸುವಂತಾಗಲಿ ಅವರ ಧಾರ್ಮಿಕ ವಿಚಾರಗಳಿಗೆ ಈ ನಾಡಿನ ಸಕಲ ಭಕ್ತರೂ ಸ್ಪಂದಿಸಲಿ ಭಗವಂತ ಅವರ ಕುಟುಂಬಕ್ಕೆ ಸುಖ ಸಂಪತ್ತು ಆರೋಗ್ಯ ನೀಡಲೆಂದು ಪ್ರಾರ್ಥಿಸಿದರು.
ಪ್ರವಚನ ಮಂಗಲದ ಅಧ್ಯಕ್ಷತೆಯನ್ನು ಗೌರವ ವಿಚಾರಣಾಕರ್ತರಾದ ನಾರಾಯಣ ಇಲ್ಲೂರ ವಹಿಸಿ, ಪ್ರವಚನಕ್ಕೆ ತನುಮನ ಧನದಿಂದ ಸಹಾಯ ಸಹಕಾರ ನೀಡಿದ ಸರ್ವರಿಗೂ ಅಭಿನಂದಿಸಿದರು.
ಪ್ರಾಸ್ತಾವಿಕವಾಗಿ ದಿಲೀಪಕುಮಾರ ಜೋಶಿ, ಮಾತನಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕೆ ಗುರಾಚಾರ್ಯ, ಪರಿಮಳಾ ಭಜನಾ ಮಂಡಳಿ ಗೌರವಾಧ್ಯಕ್ಷ ಶಮಂತಕಮಣಿ ಇಲ್ಲೂರ, ಅಧ್ಯಕ್ಷರಾದ ಚಂದ್ರಕಲಾ ಕಾಗಲಕರ, ವಿಜಯಲಕ್ಷ್ಮೀ ದಪ್ತರದಾರ, ಶ್ರೀದೇವಿ ಜೋಶಿ, ಶೋಭಾ ಎಸ್ ಕುಲಕರ್ಣಿ , ವಿನೋದಾ ತಾವರಗೇರಿ, ಹೇಮಾ ಕುಲಕಣರ್ಿ, ವಿಧ್ಯಾವತಿ ಕೃಷ್ಣಮೂರ್ತಿ , ಅಪೇಕ್ಷಾ ದಪ್ತರದಾರ, ಸುಧಾ ಕೆ, ಶ್ರೀದೇವಿ ತಂಗೋಡ, ಅರ್ಚನಾ ಕಬ್ಬೂರ, ಗೌರಿ ಕುಲಕರ್ಣಿ, ಶಕುಂತಲಾ ಕುಲಕರ್ಣಿ ವಿಜಯಲಕ್ಷ್ಮೀ ಎಸ್ ರಾವ್, ಭಾಗ್ಯಾ ಗುಡ್ಡದ, ದ್ರಾಕ್ಷಾಯಿಣಿ ಹೇಮಾದ್ರಿ, ಯಶೋಧಾ ಗುಡ್ಡದ, ನಂದಿನಿ ಹೇಮಾದ್ರಿ ವನಮಾಲಾ ಅಬ್ಬಿಗೇರಿ, ರಾಧಾ ಚಿನ್ನಿ, ವೀಣಾ ಜವಳಗೇರಿ, ಶಶಿಕಲಾ ಕುಕನೂರ, ಶಕುಂತಲಾ ಹಂಪಿಮಠ, ಈಶ್ವರಪ್ಪ ಹಂಚಿನಾಳ, ನಾಗಪ್ಪ ಶೇಡದ, ಸಿ.ಬಿ.ಚನ್ನಳ್ಳಿ, ಬಿ.ವ್ಹಿ.ಮುದ್ದಿ, ವೀರಣ್ಣ ಘಟ್ಟಿ, ರಾಘವೇಂದ್ರ ಚಿನ್ನಿ, ರಾಘವೇಂದ್ರ ಕುಲಕರ್ಣಿ, ಕೃಷ್ಣಮೂರ್ತಿ , ರಘೋತ್ತಮ ಡಂಬಳ, ಮಂಜು ಮುಧೋಳ, ಗುಂಡೂರಾವ ಕಾಗಲಕರ, ಸೇತುರಾಮಾಚಾರ್ಯ ಕಟ್ಟಿ, ಸಂಜೀವ ಮುಂಡರಗಿ, ವ್ಹಿ.ಎನ್.ಕೊಪ್ಪಳ, ಎಚ್.ಆರ್.ದಪ್ತರದಾರ, ಪ್ರೋ ಆರ್.ಕೆ.ರಾಯನಗೌಡರ, ಮಂಜುನಾಥ ಗುಡ್ಡದ, ದೇವಣ್ಣ ಜವಳಗೇರಿ, ಕೃಷ್ಣ ಜವಳಗೇರಿ, ವೆಂಕಟೇಶ ಕುಲಕರ್ಣಿ, ಕೃಷ್ಣ ಸಾವಕಾರ, ಸಂದೀಪ ಕಟ್ಟಿ, ಮನೋಜ ನಾಡಗೌಡ, ಸುನೀಲ ಕುಲಕರ್ಣಿ, ಡಾ ವಾದಿರಾಜ ತಂಗೋಡ, ಎ.ಎಸ್.ಮಕಾಂದಾರ, ರಂಗಪ್ಪ ಕೋಳಿ,ಎಸ್ ಕೆ ಹುಬ್ಬಳ್ಳಿ, ಹಾಗೂ ಪರಿಮಳ ಭಜನಾಮಂಡಳಿ, ವಾಸವಿ ಭಜನಾ ಮಹಿಳಾ ಮಂಡಳಿ,ಬ್ರಾಹ್ಮಣ ಓಣಿಯ ವಿಠ್ಠಲ ಮಂದಿರದ ವಿಪ್ರ ಮಹಿಳೆಯರು ಆಗಮಿಸಿದ್ದರು