ಸೆ. 3ರಿಂದ ಭಾಗವತ್ರವರ ಪ್ರವಚನ
ಮುಂಡರಗಿ 01: ಮುಂಡರಗಿಯ ಇಲ್ಲೂರ ತೋಟದಲ್ಲಿರುವ ನಂಜನಗೂಡ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಸೆ.3 ರಿಂದ ಸೆ.9 ರವರೆಗೆ ಭಾಗವತ್ ಪ್ರವಚನ ಹಾಗೂ ಸೆ.3 ರಂದು ಸಂಜೆ 6 ಘಂಟೆಗೆ ಪರಿಮಳಾ ಭಜನಾ ಮಹಿಳಾ ಮಂಡಳ ಉದ್ಘಾಟನೆ ಜರುಗಲಿದೆ ಎಂದು ನಾರಾಯಣ ಇಲ್ಲೂರ ಹೇಳಿದರು.
ಸ್ಥಳಿಯ ರಾಯರ ಮಠದಲ್ಲಿ ಗುರುವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪಂಡಿತರಾದ ಫಣೇಂಧ್ರ ಆಚಾರ್ಯ.ಎಂ ಅವರು ಶ್ರೀಮದ್ ಭಾಗವತ ಕುರಿತು ಪ್ರವಚನ ನೀಡಲಿದ್ದಾರೆ. ನಂತರ ಶ್ರೀ ಪರಿಮಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮಗಳು ಜರುಗಲಿದೆ. ಸಕಲ ಭಕ್ತರು ಶ್ರೀಮದ್ ಭಾಗವತ ಪ್ರವಚನಗಳನ್ನು ಆಲಿಸಬೇಕೆಂದು ತಿಳಿಸಿದರು. ಪ್ರವಚನ ಪ್ರತಿನಿತ್ಯ ಸಂಜೆ 6 ಘಂಟೆಗೆ ಪ್ರಾರಂಭಗೊಳ್ಳಲಿದೆ ಎಂದರು.
ರಾಜ್ಯ ಕೃಷಿ ಪಂಡಿತ ಪುರಸ್ಕೃತರಾದ ಈಶ್ವರ್ಪ ಹಂಚಿನಾಳ ಸೇರಿದಂತೆ ಅನೇಕರು ಮುಖ್ಯಅತಿಥಿಗಳಾಗಿ ಆಗಮಿಸುವರು. ಈ ಸಂದರ್ಭದಲ್ಲಿ ಪತ್ರಕರ್ತರಾದ ದೀಲೀಪಕುಮಾರ ಜೋಶಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಕೆ.ಗುರಾಚಾರ್ಯ, ಕೃಷ್ಣಮೂರ್ತಿ, ರಘೋತ್ತಮ ಡಂಬಳ, ಗೋವಿಂದರಾಜ ಹೆಗ್ಗಡಾಳ ಗುಂಡೂರಾವ ಕಾಗಲಕರ, ರಾಘವೇಂದ್ರ ಕುಲಕರ್ಣಿ, ರಾಘವೇಂದ್ರ ಕಾಗಲಕರ, ಪರಿಮಳಾ ಭಜನಾ ಮಂಡಳಿ ಅಧ್ಯಕ್ಷರಾದ ಚಂದ್ರಕಲಾ ಕಾಗಲಕರ, ಉಪಾಧ್ಯಕ್ಷರಾದ ಶೋಭಾ ಕುಲಕರ್ಣಿ, ಕಾರ್ಯದರ್ಶಿ ಹೇಮಾ ಕುಲಕರ್ಣಿ, ಸುಧಾ ಗುರಾಚಾರ್ಯ, ವಿಧ್ಯಾವತಿ ಕೃಷ್ಣಮೂರ್ತಿ, ಶ್ರೀದೇವಿ ಜೋಶಿ, ಅರ್ಚನಾ ಕಬ್ಬೂರ, ಶಕುಂತಲಾ ಕುಲಕರ್ಣಿ, ಎ.ಎಸ್.ಮಕಾಂದಾರ, ವೆಂಕಟೇಶ ಕುಲಕರ್ಣಿ, ಎಸ್.ಕೆ.ಹುಬ್ಬಳ್ಳಿ, ರಂಗಪ್ಪ ಕೋಳಿ, ಈರಣ್ಣ ಕೊರಡಕೇರಿ ಮೊದಲಾದವರಿದ್ದರು.